ತಿರುವನಂತಪುರ: ಸಿಪಿಎಂ ರಾಜ್ಯ ಕಾರ್ಯದರ್ಶಿ ಸೀತಾರಾಂ ಯೆಚೂರಿ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್. ಸುರೇಂದ್ರನ್ ವ್ಯಾಪಕವಾಗಿ ಟೀಕಿಸಿದ್ದಾರೆ. ಕೇರಳದಲ್ಲಿ ನಡೆಯುತ್ತಿರುವುದು ಅಖಿಲ ಭಾರತ ಮಟ್ಟದಲ್ಲಿ ಒಟ್ಟಾಗಿ ನಿಂತಿರುವ ಕಾಂಗ್ರೆಸ್ ಮತ್ತು ಸಿಪಿಎಂ ನಡುವಿನ ಜಗಳವಾಗಿದೆ ಎಂದು ಸುರೇಂದ್ರನ್ ಹೇಳಿದ್ದಾರೆ.
ವಾಳಯಾರ್ ಆಚೆಗೆ ಸಿಪಿಎಂ ನಾಯಕರು ರಾಹುಲ್ ಗಾಂಧಿ ಜೊತೆ ಇರುತ್ತಾರೆ. ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಸೋನಿಯಾ ಗಾಂಧಿಯವರ ಸಲಹೆಗಾರರಾಗಿದ್ದಾರೆ. ಆದರೆ ಕೇರಳದಲ್ಲಿ ಕೊಡಿಯೇರಿ ಮತ್ತು ಸುಧಾಕರನ್ ಕೇರಳೀಯರನ್ನು ವಂಚಿಸುತ್ತಿದ್ದಾರೆ. 2024ರ ಲೋಕಸಭೆ ಚುನಾವಣೆಯಲ್ಲಿ ಸಿಪಿಐ (ಎಂ) ಮತ್ತು ಕಾಂಗ್ರೆಸ್ ಜೊತೆ-ಜೊತೆಗೇ ಮುಂಚೂಣಿಯಲ್ಲಿಯೇ ಉಳಿದು ಸ್ಪರ್ಧಿಸಲಿವೆ ಎಂಬ ವಿಶ್ವಾಸವಿದೆ ಎಂದು ಸುರೇಂದ್ರನ್ ಹೇಳಿದರು.
ಯಾವುದೇ ಅಪವಿತ್ರ ಮೈತ್ರಿಯನ್ನು ಸೋಲಿಸಲು ಬಿಜೆಪಿ ಸಮರ್ಥವಾಗಿದೆ. ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶಗಳು ನರೇಂದ್ರ ಮೋದಿಯವರೊಂದಿಗೆ ಜನತೆ ಇದ್ದಾರೆ ಎನ್ನುವುದನ್ನು ತೋರಿಸುತ್ತದೆ. ಎರಡೂ ಪಕ್ಷಗಳು ಜನರ ಕಣ್ಣಲ್ಲಿ ಧೂಳೆಬ್ಬಿಸುವುದನ್ನು ಬಿಟ್ಟು ಕೇರಳದಲ್ಲೂ ಒಟ್ಟಾಗಿ ಸ್ಪರ್ಧಿಸಲು ಸಿದ್ಧರಾಗಬೇಕು ಎಂದು ಸುರೇಂದ್ರನ್ ಹೇಳಿದರು.