ತಿರುವನಂತಪುರಂ: ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಅಮೆರಿಕ ಪ್ರವಾಸದ ದಿನಾಂಕ ಬದಲಾಗಿದೆ. ಮುಂದಿನ ಭಾನುವಾರ ಚಿಕಿತ್ಸೆಗಾಗಿ ತೆರಳಲು ನಿರ್ಧರಿಸಲಾಗಿದೆ. ಮೊದಲು ಶನಿವಾರ ನಿಗದಿಪಡಿಸಲಾಗಿತ್ತು.
ಅವರು ಅಮೆರಿಕದ ಮೇಯೊ ಕ್ಲಿನಿಕ್‍ನಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ. ಮುಖ್ಯಮಂತ್ರಿ ಗೈರುಹಾಜರಿಯಲ್ಲಿ ಸಚಿವ ಸಂಪುಟ ಸಭೆಯ ಅಧ್ಯಕ್ಷತೆಯನ್ನು ಯಾರು ವಹಿಸಲಿದ್ದಾರೆ ಎಂಬುದನ್ನು ಇನ್ನೂ ಸ್ಪಷ್ಟಪಡಿಸಿಲ್ಲ.
ಮುಖ್ಯಮಂತ್ರಿ ಜನವರಿ 11ರಿಂದ 26ರವರೆಗೆ ಅಮೆರಿಕದಲ್ಲಿದ್ದರು. ಪಿಣರಾಯಿ ವಿಜಯನ್ ಅವರ ಪತ್ನಿ ಕಮಲಾ ಜೊತೆಗಿದ್ದರು. ಈ ನಡುವೆ ಸಿಪಿಎಂ ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಹೆಚ್ಚಿನ ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳುತ್ತಿದ್ದಾರೆ. ಮುಖ್ಯಮಂತ್ರಿ ನಿರ್ಗಮನದ ಬಳಿಕ 4 ದಿನಗಳ ನಂತರ ಕೊಡಿಯೇರಿ ತೆರಳಲಿದ್ದಾರೆ.