HEALTH TIPS

ಹೈಕಮಾಂಡ್ ಪ್ರಸ್ತಾವನೆ ತಿರಸ್ಕರಿಸಿ ಸಿಪಿಎಂ ಸೆಮಿನಾರ್ ಗೆ ತೆರಳುವುದಾಗಿ ಗುಟುರು ಹಾಕಿದ ಕೆ.ವಿ.ಥಾಮಸ್

                                

                  ಕೊಚ್ಚಿ: ಸಿಪಿಎಂ ಪಕ್ಷದ ರಾಷ್ಟ್ರೀಯ ಸಮ್ಮೇಳನದ (ಕಾಂಗ್ರೆಸ್) ವಿಚಾರ ಸಂಕಿರಣದಲ್ಲಿ ಪಾಲ್ಗೊಳ್ಳುವುದಾಗಿ ಹಿರಿಯ ಕಾಂಗ್ರೆಸ್ ನಾಯಕ ಕೆವಿ ಥಾಮಸ್ ಘೋಷಿಸಿದ್ದಾರೆ. ಹೈಕಮಾಂಡ್ ಪ್ರಸ್ತಾವನೆಯನ್ನು ಕೆ.ವಿ.ಥಾಮಸ್ ತಿರಸ್ಕರಿಸಿ ಸಿಪಿಎಂ ಸಮ್ಮೇಳನಕ್ಕೆ ಹಾಜರಾಗಲು ನಿರ್ಧರಿಸಿದ್ದಾರೆ. ವಿಚಾರ ಸಂಕಿರಣಕ್ಕೆ ರಾಷ್ಟ್ರೀಯ ಪ್ರಾಮುಖ್ಯತೆ ಇರುವುದರಿಂದ ಪಾಲ್ಗೊಳ್ಳಲು ನಿರ್ಧರಿಸಿರುವುದಾಗಿ ತಿಳಿಸಿದರು.

                   ಮಾರ್ಚ್ ಮೊದಲ ವಾರದಲ್ಲಿ ಯೆಚೂರಿ ಅವರೊಂದಿಗೆ ಈ ಕುರಿತು ಮಾತನಾಡಿದ್ದೆ. ನಂತರ ವಿಚಾರ ಸಂಕಿರಣವು ಎರಡು ವಿಷಯಗಳನ್ನು ಒಳಗೊಂಡಿರುತ್ತದೆ ಎಂದು ಹೇಳಿದರು. ಈ ಬಗ್ಗೆ ತಾರಿಕ್ ಅನ್ವರ್ ಜೊತೆ ಮಾತನಾಡಿದ್ದರು. ಕೇಂದ್ರ-ರಾಜ್ಯ ಸಂಬಂಧಗಳ ಕುರಿತು ಹಲವು ಆಯೋಗಗಳಿವೆ. ಈ ಬಗ್ಗೆ ಸಂಸತ್ತಿನಲ್ಲಿ ಚರ್ಚೆ ನಡೆಸಲಾಗಿದೆ ಎಂದು ಕೆ.ವಿ.ಥಾಮಸ್ ಸ್ಪಷ್ಟಪಡಿಸಿದರು.

                  ಹಲವು ರಾಜ್ಯಗಳಲ್ಲಿ ಕಾಂಗ್ರೆಸ್ಸೇತರ ಸರ್ಕಾರಗಳು ರಚನೆಯಾದವು. ಇದು ರಾಷ್ಟ್ರೀಯ ಪ್ರಾಮುಖ್ಯತೆಯ ಸೆಮಿನಾರ್ ಆಗಿರುವುದರಿಂದ ನಾನು ಭಾಗವಹಿಸಲು ಆಸಕ್ತಿ ಹೊಂದಿದ್ದೆ. ಕಾಂಗ್ರೆಸ್ ಅಧ್ಯಕ್ಷರು ಸಂಸದ ಶಶಿ ತರೂರ್‍ಗೆ ಹಾಜರಾಗದಂತೆ ತಿಳಿಸಿದ್ದರು.  ಸದ್ಯದ ರಾಜಕೀಯ ಪರಿಸ್ಥಿತಿ ಕುರಿತು ಸೋನಿಯಾ ಗಾಂಧಿ ಅವರಿಗೆ ಮಾಹಿತಿ ನೀಡಲಾಗಿದೆ. ಆದರೆ ಪಕ್ಷದಿಂದ ಹೊರಹಾಕುವುದಾಗಿ ಬೆದರಿಕೆಯ ದನಿಯಲ್ಲಿ ಹೇಳಿದ್ದಾರೆ. ತಾನು ಪಕ್ಷದಿಂದ ಮೊಳಕೆಯೊಡೆದವನಲ್ಲ ಎಂದರು.

               ತಾನು ಹುಟ್ಟಿನಿಂದ ಕಾಂಗ್ರೆಸ್ಸಿಗ. 2019ರಲ್ಲಿ ತನಗೆ ಸ್ಥಾನ ನಿರಾಕರಿಸಲಾಗಿತ್ತು. ಅಂದು ಚುನಾವಣಾ ಸಮಿತಿ ಸಭೆ ಸೇರುವ ಒಂದು ಗಂಟೆ ಮುನ್ನವೇ ಸ್ಥಾನ ನೀಡಲಾಗದು ಎಂದು ಘೋಷಿಸಲಾಗಿತ್ತು. ನಂತರ ಒಂದೂವರೆ ವರ್ಷ ಕಾದಿದ್ದೆ. ಸಂಸತ್ತಿಗೆ ಹೋಗುವುದಕ್ಕಲ್ಲ, ಪಕ್ಷದಲ್ಲಿ ಅರ್ಹವಾದ ಪರಿಗಣನೆಯನ್ನು ಪಡೆಯಲು. ಹಾಗಾಗಲಿಲ್ಲ. ನಾನು ಏಳು ಬಾರಿ ಗೆದ್ದಿದ್ದು ನನ್ನ ತಪ್ಪಲ್ಲ. ನನ್ನನ್ನು ಗರಿಷ್ಠವಾಗಿ ಅವಮಾನಿಸಿದ್ದಾರೆ ಎಂದು ಥೋಮಸ್ ಟೀಕಿಸಿದರು. ತಾನು ಸಿಪಿಎಂ ಸಮ್ಮೇಳನಕ್ಕೆ ತೆರಳುತ್ತಿಲ್ಲ. ಆದರೆ ಸೆಮಿನಾರ್‍ಗೆ ಹೋಗುತ್ತಿರುವುದಾಗಿ ತಿಳಿಸಿರುವರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries