HEALTH TIPS

ಧಾರ್ಮಿಕ ಆಚರಣೆಯೊಂದಿಗೆ ಸಾಮಾಜಿಕ ಸೇವೆಯೂ ಮಿಳಿತಗೊಂಡಾಗ ಆಚರಣೆಯು ಪರಿಪೂರ್ಣವಾಗುತ್ತದೆ: ಅನಂತ ರೈ ಮಾಸ್ತರ್

    

                     ಮುಳ್ಳೇರಿಯ: ನಾಗ ಮತ್ತು ಗುಳಿಗ ಆರಾಧನೆಯು ತುಳುನಾಡಿನ ಸಂಸ್ಕøತಿಯ ಅವಿಭಾಜ್ಯ ಅಂಗ. ಇವುಗಳ ಕ್ರಮಾನುಗತವಾದ ಆರಾಧನೆಯ ಮೂಲಕ ಸುಖ ಶಾಂತಿ ಸಂತೃಪ್ತಿಯನ್ನು ಪಡೆದುಕೊಳ್ಳಬಹುದು. ಈ ರೀತಿಯ ದೇವತಾರಾಧನೆಯ ಸಮಯದಲ್ಲಿ ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನೂ ಆಯೋಜಿಸಿಕೊಂಡಾಗ ಆ ಕಾರ್ಯಕ್ರಮವು ಸಮಾಜಮುಖಿಯಾಗಿ ಅರ್ಥವೂರ್ಣವಾಗುತ್ತದೆ. ಯಾವನೇ ವ್ಯಕ್ತಿ ತನ್ನ ಸಾಧನೆಯ ಮೂಲಕ ಉನ್ನತ ಹಂತಕ್ಕೆ ಏರಿದಾಗ ಅದಕ್ಕೆ ಕಾರಣವಾದ ತನ್ನ ಹೆತ್ತವರು, ಶಾಲೆ, ಗುರುಗಳು, ಊರವರು ಮತ್ತು ತನ್ನ ಪರಿಸರವನ್ನು ಮರೆಯಬಾರದು. ತನ್ನ ಸಾಧೆನೆಯ ಒಂದಂಶವನ್ನು ತನ್ನೂರಿಗೆ ತನ್ನವರಿಗೆ ಸಮಾಜಕ್ಕೆ ವಿನಿಯೋಗಿಸಬೇಕು. ಪ್ರಸ್ತುತ ಡಾ ಪ್ರಭಾಕರ ರೈಯವರು ಈ ರೀತಿಯಾಗಿ ಅನುಕರಣೀಯವಾದ ಕಾರ್ಯವನ್ನು ಮಾಡುತ್ತಾ ಇತರರಿಗೆ ಮಾದರಿಯಾಗಿದ್ದಾರೆ ಎಂದು ನಿವೃತ್ತ ಮುಖ್ಯೋಪಾಧ್ಯಾಯ ಅನಂತ ರೈ ಮಾಸ್ತರ್ ಮೂಡಾಯೂರು ನುಡಿದರು. 

            ದೇಲಂಪಾಡಿ ಮುದಿಯಾರಿನ ಶ್ರೀ ನಾಗೇಂದ್ರ ಸನ್ನಿಧಿಯಲ್ಲಿ 17 ನೇ ವಾರ್ಷಿಕೋತ್ಸವದ ಅಂಗವಾಗಿ ಎಪ್ರೀಲ್ 14ರಂದು ನಡೆದ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿ ಅವರು ಮಾತನಾಡುತ್ತಿದ್ದರು.


                    ಊಜಂಪಾಡಿ ಮಣಿಯೂರು ಶ್ರೀ ಶಾಸ್ತಾರ ದೇವಸ್ಥಾನದ ಮೊಕ್ತೇಸರ ಎ ನಾರಾಯಣ ನಾೈಕ್ ಮತ್ತು ಅನಸೂಯ ನಾರಾಯಣ ನಾೈಕ್ ರವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮುದಿಯಾರಿನ ಈ ಗ್ರಾಮೀಣ ಪ್ರದೇಶದ ಒಳಭಾಗದಲ್ಲಿ ಕಳೆದ 17 ವರ್ಷಗಳಿಂದ ಧಾರ್ಮಿಕ ಕಾರ್ಯಕ್ರಮದ ಜೊತೆಯಲ್ಲಿ ಉಚಿತ ಆರೋಗ್ಯ ಶಿಬಿರ ಮತ್ತು ಊರವರನ್ನು, ವಿದ್ಯಾರ್ಥಿ ಪ್ರತಿಭೆಗಳನ್ನು ಅಭಿನಂದಿಸುವ ಕಾರ್ಯವನ್ನು ಮಾಡುತ್ತಿರುವುದು ಇತರರಿಗೆ ಮಾದರಿ ಎಂದು ಹೇಳಿದರು.

                    ಸನ್ಮಾನಿತರಾದ ಸಾಧಕ ಸಾಧಕಿಯರನ್ನು ಅಭಿನಂದಿಸಿ ಮಾತನಾಡಿದ ಕುಂಬಳೆ ಉಪಜಿಲ್ಲಾ ಶಿಕ್ಷಣಾಧಿಕಾರಿ ಯತೀಶ್ ಕುಮಾರ್ ರೈಯವರು ಭಾರತೀಯ ಸಂಸ್ಕೃತಿಯ ಧ್ಯೇಯವಾಕ್ಯವಾದ ಮಾತೃ ದೇವೋಭವ, ಪಿತೃದೇವೋಭವ, ಆಚಾರ್ಯ ದೇವೋಭವ ಮತ್ತು ಅತಿಥಿ ದೇವೋಭವ ಎಂಬುದು ಇಲ್ಲಿ ಸಂಪೂರ್ಣವಾಗಿ ಸಾಕಾರಗೊಂಡಿದೆ. ಇಲ್ಲಿನ ಧಾರ್ಮಿಕ ಕಾರ್ಯದ ಜೊತೆಯಲ್ಲಿ ಶ್ರೇಷ್ಠವಾದ ಗುರುಸ್ಥಾನವನ್ನು ಮತ್ತು ಆ ಗುರುತ್ವದಿಂದ ಚಿಗುರೊಡೆದ ಪ್ರತಿಭೆಗಳನ್ನು ಗೌರವಿಸುವ ಕೆಲಸವನ್ನು ಮಾಡಿರುವುದು ಅತ್ಯಂತ ಮಹತ್ವದ ವಿಚಾರ. ಇದಕ್ಕೆ ಕಾರಣರಾದ ಸರಸ್ವತಿ ಎನ್ ರೈ ಮತ್ತು ಮಕಳು ಅಭಿನಂದನಾರ್ಹರು ಎಂದರು. 

                         ಇದೇ ಸಂದರ್ಭದಲ್ಲಿ ನಾರಾಯಣ ದೇಲಂಪಾಡಿಯವರು ಬರೆದ ಮಾರಣಾಧ್ವರ, ಸಮರ ಸನ್ನಾಹ ಮತ್ತು ಭೀಷ್ಮ ಸೇನಾಧಿಪತ್ಯ ಪ್ರಸಂಗಗಳ ಅರ್ಥಸಹಿತ ಆವೃತ್ತಿಯನ್ನು ವಿಶ್ವ ವಿನೋದ ಬನಾರಿಯವರು ಬಿಡುಗಡೆಗೊಳಿಸಿದರು.

                   ಮನೆಯವರಾದ ಚಂದ್ರಶೇಖರ ರೈ ಸನ್ಮಾನ ಪತ್ರ ವಾಚಿಸಿದರು. ಎಂ ರಾಧಾಕೃಷ್ಣ ರೈ ಮತ್ತು ಎಂ ಸುಧಾಕರ ರೈಯವರು ಅತಿಥಿಗಳನ್ನು ಶಾಲು ಮತ್ತು ಸ್ಮರಣಿಕೆಗಳನ್ನಿತ್ತು ಬರಮಾಡಿಕೊಂಡರು.

ಕಾರ್ಯಕ್ರಮದಲ್ಲಿ ಬೆಳ್ಳಿಪ್ಪಾಡಿ ಬಾಲಕೃಷ್ಣ ಗೌಡ ದೇಲಂಪಾಡಿ ಶುಭಾಶಂಸನೆಗೈದರು. ಎಂ ರಮಾನಂದ ರೈ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.  ಎಂ ಸಂಜೀವ ರೈ ವಂದಿಸಿದರು. ಜಲಜಾಕ್ಷಿ ಟೀಚರ್ ಮತ್ತು ದೇಲಂಪಾಡಿ ರಾಮಣ್ಣ ಮಾಸ್ತರ್ ಕಾರ್ಯಕ್ರಮ ನಿರ್ವಹಿಸಿದರು.

                   ಸಭಾ ಕಾರ್ಯಕ್ರಮದ ಬಳಿಕ ಮೀಂಜ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಗಳೂ ಕಾರ್ಯಕ್ರಮದ ಆಯೋಜಕರೂ ಆದ ಡಾ ಪ್ರಭಾಕರ ರೈ ಮತ್ತು ಅವರ ಶ್ರೀಮತಿಯವರಾದ ಡಾ. ಶಾರಿಕಾ ಪ್ರಭಾಕರ ರೈಯವರ ನೇತೃತ್ವದಲ್ಲಿ ಉಚಿತ ಅಲೋಪಥಿ ಮತ್ತು ಆಯುರ್ವೇದಿಕ್ ವೈದ್ಯಕೀಯ ಶಿಬಿರವು ನಡೆಯಿತು. ಶಿಬಿರದಲ್ಲಿ ನೂರಕ್ಕಿಂತಲೂ ಹೆಚ್ಚು ರೋಗಿಗಳನ್ನು ಪರೀಕ್ಷಿಸಿ ಅವರಿಗೆ ಉಚಿತವಾಗಿ ಔಷಧಿಯನ್ನು ನೀಡಲಾಯಿತು. ಅಗತ್ಯವಿರುವವರಿಗೆ ಸುಧಾರಿತ ಊರುಗೋಲುಗಳನ್ನೂ ನೀಡಲಾಯಿತು.

                          ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಸಂಘದ ಸದಸ್ಯರಿಂದ ಸಮರ ಸನ್ನಾಹ ಭೀಷ್ಮ ಸೇನಾಧಿಪತ್ಯ ಯಕ್ಷಗಾನ ತಾಳಮದ್ದಳೆಯು ಜರಗಿತು.

ಧಾರ್ಮಿಕ ಕಾರ್ಯಕ್ರಮದ ಭಾಗವಾಗಿ ಶ್ರೀ ಮಹಾಗಣಪತಿ ಹವನ, ಭಜನೆ, ನಾಗ ಮತ್ತು ಗುಳಿಗ ದೇವರಿಗೆ ತಂಬಿಲ ಸೇವೆಯು ನಡೆಯಿತು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries