ತಿರುವನಂತಪುರಂ: ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಮತ್ತೆ ತಮ್ಮ ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಲಿದ್ದಾರೆ. ಇದೇ ತಿಂಗಳ 23ರಂದು ಮಯೋಕ್ಲಿನಿಕ್ ನಲ್ಲಿ ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಲಿದ್ದಾರೆ. ಈ ಬಗ್ಗೆ ಹೆಚ್ಚಿನ ವಿವರಗಳನ್ನು ಸರ್ಕಾರ ಇನ್ನೂ ಸ್ಪಷ್ಟಪಡಿಸಿಲ್ಲ.
ಈ ವರ್ಷದ ಜನವರಿಯಲ್ಲಿ ಅವರು ಮಯೋಕ್ಲಿನಿಕ್ ಚಿಕಿತ್ಸೆ ಪಡೆದಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಮುಖ್ಯಮಂತ್ರಿಗಳು ಮತ್ತೆ ಅಮೆರಿಕಕ್ಕೆ ತೆರಳುತ್ತಿದ್ದಾರೆ. ಚಿಕಿತ್ಸೆಯ ನಂತರ ಮೇ ಮಧ್ಯದಲ್ಲಿ ಮಾತ್ರ ಸಿಎಂ ರಾಜ್ಯಕ್ಕೆ ಮರಳುವ ನಿರೀಕ್ಷೆಯಿದೆ. ಈ ವೇಳೆ ಯಾರು ಉಸ್ತುವಾರಿ ವಹಿಸಿಕೊಳ್ಳುತ್ತಾರೆ ಮತ್ತು ಅವರ ಜೊತೆಯಲ್ಲಿ ಯಾರು ತೆರಳಲಿದ್ದಾರೆ ಎಂಬುದನ್ನು ಸರ್ಕಾರ ತಿಳಿಸಲಿದೆ. ಕಳೆದ ಬಾರಿ ಚಿಕಿತ್ಸೆಗೆಂದು ಹೋದಾಗ ಯಾರಿಗೂ ಜವಾಬ್ದಾರಿ ಹಸ್ತಾಂತರಿಸಿರಲಿಲ್ಲ.ಆನ್‍ಲೈನ್‍ನಲ್ಲಿ ಮುಖ್ಯಮಂತ್ರಿ ಸಂಪುಟ ಸಭೆಗೆ ಹಾಜರಾಗಿದ್ದರು.
ಅಮೆರಿಕಕ್ಕೆ ಮುಖ್ಯಮಂತ್ರಿಗಳ ಮೂರನೇ ಭೇಟಿ ಇದಾಗಿದೆ. ಜನವರಿಯಲ್ಲಿ ಸಿಎಂ ಚಿಕಿತ್ಸೆಗೆ ತಗಲಿದ ವೆಚ್ಚದ ಮಾಹಿತಿಯನ್ನು ಸರಕಾರ ನಿನ್ನೆ ಬಿಡುಗಡೆ ಮಾಡಿತ್ತು. ವೆಚ್ಚ 29.82 ಲಕ್ಷ ರೂ. ಎಂದು ತಿಳಿಸಲಾಗಿತ್ತು.
ಈ ನಡುವೆ ಪಾಲಕ್ಕಾಡ್ ನಲ್ಲಿ ನಡೆಯುತ್ತಿರುವ ರಾಜಕೀಯ ಹತ್ಯೆ, ಗೂಂಡಾ ದಾಳಿಗಳ ನಡುವೆಯೇ ಗೃಹ ಖಾತೆಯ ಹೊಣೆ ಹೊತ್ತಿರುವ ಮುಖ್ಯಮಂತ್ರಿ ಅಮೆರಿಕಕ್ಕೆ ತೆರಳುತ್ತಿದ್ದಾರೆ. ಪಾಪ್ಯುಲರ್ ಫ್ರಂಟ್ ಧಾರ್ಮಿಕ ಉಗ್ರಗಾಮಿಗಳಿಂದ ಪಾಲಕ್ಕಾಡ್ ಆರ್‍ಎಸ್‍ಎಸ್ ಶಾರೀರಿಖ್ ಪ್ರಮುಖ್ ಶ್ರೀನಿವಾಸ್ ಅವರ ಹತ್ಯೆಯಿಂದ ಸರ್ಕಾರ ತೀವ್ರ ಟೀಕೆಗೆ ಗುರಿಯಾಗಿದೆ.