HEALTH TIPS

ಬೆಂಗಳೂರಿನ ಐಐಎಸ್‌ಸಿ, ಮಿನ್‌ವ್ಯಾಕ್ಸ್‌ನಿಂದ ಕೋವಿಡ್‌ಗೆ ತಾಪಮಾನ ಸಹಿಷ್ಣು ಲಸಿಕೆ

          ನವದೆಹಲಿಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಹಾಗೂ ಸ್ಟಾರ್ಟಪ್‌ 'ಮಿನ್‌ವ್ಯಾಕ್ಸ್‌' ಅಭಿವೃದ್ಧಿಪಡಿಸುತ್ತಿರುವ ಕೋವಿಡ್‌ನ 'ಸಂಭಾವ್ಯ ಲಸಿಕೆ'ಯ ಶೇಖರಣೆಗೆ ಶೀತಲೀಕರಣ ವ್ಯವಸ್ಥೆಯ ಅಗತ್ಯವಿಲ್ಲ.

               'ತಾಪಮಾನ ಸಹಿಷ್ಣು' ಆಗಿರುವ ಈ 'ಸಂಭಾವ್ಯ ಲಸಿಕೆ'ಯು ಕೊರೊನಾ ವೈರಸ್‌ನ ರೂಪಾಂತರ ತಳಿಗಳ ವಿರುದ್ಧ ಪರಿಣಾಮಕಾರಿ ಎಂಬುದು ಅಧ್ಯಯನದಿಂದ ತಿಳಿದು ಬಂದಿದೆ.

            ಇಲಿಗಳ ಮೇಲೆ ಈ 'ಸಂಭಾವ್ಯ ಲಸಿಕೆ'ಯ ಪರಿಣಾಮವನ್ನು ಅಧ್ಯಯನ ಮಾಡಲಾಗಿದೆ. ಈ 'ಸಂಭಾವ್ಯ ಲಸಿಕೆ'ಯು ಡೆಲ್ಟಾ ಹಾಗೂ ಓಮೈಕ್ರಾನ್ ಸೇರಿದಂತೆ ಕೊರೊನಾ ವೈರಸ್‌ನ ಎಲ್ಲ ರೂಪಾಂತರ ತಳಿಗಳ ವಿರುದ್ಧ ಇಲಿಗಳಲ್ಲಿ ಪ್ರಬಲ ಪ್ರತಿಕಾಯಗಳನ್ನು ಸೃಷ್ಟಿಸಿರುವುದು ಅಧ್ಯಯನದಿಂದ ತಿಳಿದುಬಂದಿದೆ.

                ಈ ಅಧ್ಯಯನ ವರದಿ 'ವೈರಸಸ್‌' ಎಂಬ ನಿಯತಕಾಲಿಕದಲ್ಲಿ ಪ್ರಕಟವಾಗಿದೆ. ಕೊರೊನಾವೈರಸ್‌ ಹೊರಕವಚದ ಮೇಲಿರುವ ಮುಳ್ಳು ಚಾಚಿಕೆಗಳನ್ನು (ಸ್ಪೈಕ್‌ ಪ್ರೊಟೀನ್‌) ಬಳಸಿಕೊಂಡು ಈ 'ಸಂಭಾವ್ಯ ಲಸಿಕೆ'ಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

ಸದ್ಯ ಬಳಕೆಯಲ್ಲಿರುವ ಕೋವಿಡ್‌ ಲಸಿಕೆಗಳನ್ನು ಕಡಿಮೆ ತಾಪಮಾನದಲ್ಲಿ ಶೇಖರಣೆ ಮಾಡಬೇಕು. ಕೋವಿಶೀಲ್ಡ್‌ ಲಸಿಕೆ ಶೇಖರಣೆಗೆ 2 ರಿಂದ 8 ಡಿಗ್ರಿ ಸೆಲ್ಸಿಯಸ್‌ ತಾಪಮಾನದ ಅಗತ್ಯ ಇದೆ. ಫೈಜರ್‌ನ ಲಸಿಕೆಯನ್ನು ವಿಶೇಷ ವ್ಯವಸ್ಥೆಯಲ್ಲಿ ಮೈನಸ್ 70 ಡಿಗ್ರಿ ಸೆಲ್ಸಿಯಸ್‌ನಲ್ಲಿ ಶೇಖರಣೆ ಮಾಡಬೇಕು.

ಆದರೆ, ಐಐಎಸ್‌ಸಿ ಹಾಗೂ ಮಿನ್‌ವ್ಯಾಕ್ಸ್‌ ಜಂಟಿಯಾಗಿ ಅಭಿವೃದ್ಧಿಪಡಿಸುತ್ತಿರುವ ಸಂಭಾವ್ಯ ಲಸಿಕೆಯನ್ನು 37 ಡಿಗ್ರಿ ಸೆಲ್ಸಿಯಸ್‌ ತಾಪಮಾನದಲ್ಲಿ ನಾಲ್ಕು ವಾರಗಳ ಕಾಲ ಶೇಖರಿಸಿಡಬಹುದು. 100 ಡಿಗ್ರಿ ಸೆಲ್ಸಿಯಸ್‌ ತಾಪಮಾನದ ಪರಿಸರದಲ್ಲಿ ಈ ಸಂಭಾವ್ಯ ಲಸಿಕೆಯನ್ನು 90 ನಿಮಿಷಗಳ ಕಾಲ ಶೇಖರಣೆ ಮಾಡಬಹುದು ಎಂದು ಈ ಸಂಶೋಧಕರು ಹೇಳಿದ್ದಾರೆ.

              ಆಸ್ಟ್ರೇಲಿಯಾದ ಕಾಮನ್‌ವೆಲ್ತ್ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಸಂಸ್ಥೆ (ಸಿಎಸ್‌ಐಆರ್‌ಒ) ಸಹ ಈ ಸಂಶೋಧನೆಗೆ ಕೈಜೋಡಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries