ನವದೆಹಲಿ: ಭವಿಷ್ಯದಲ್ಲಿ ನಡೆಯುವ ಯುದ್ಧಗಳು 'ಹೈಬ್ರಿಡ್' ವಿಧಾನಗಳ ಮೂಲಕ ನಡೆಯಲಿವೆ. ಸೈಬರ್ ಹಾಗೂ ಮಾಹಿತಿಯೇ ಇಂಥ ಯುದ್ಧಗಳ ಆಧುನಿಕ ತಂತ್ರಗಳಾಗಿವೆ ಎಂದು ವಾಯುಪಡೆ ಮುಖ್ಯಸ್ಥ ಏರ್‌ಚೀಫ್ ಮಾರ್ಷಲ್ ವಿ.ಆರ್.ಚೌಧರಿ ಮಂಗಳವಾರ ಹೇಳಿದರು.
ನವದೆಹಲಿ: ಭವಿಷ್ಯದಲ್ಲಿ ನಡೆಯುವ ಯುದ್ಧಗಳು 'ಹೈಬ್ರಿಡ್' ವಿಧಾನಗಳ ಮೂಲಕ ನಡೆಯಲಿವೆ. ಸೈಬರ್ ಹಾಗೂ ಮಾಹಿತಿಯೇ ಇಂಥ ಯುದ್ಧಗಳ ಆಧುನಿಕ ತಂತ್ರಗಳಾಗಿವೆ ಎಂದು ವಾಯುಪಡೆ ಮುಖ್ಯಸ್ಥ ಏರ್‌ಚೀಫ್ ಮಾರ್ಷಲ್ ವಿ.ಆರ್.ಚೌಧರಿ ಮಂಗಳವಾರ ಹೇಳಿದರು.
ಆಲ್ ಇಂಡಿಯಾ ಮ್ಯಾನೇಜ್‌ಮೆಂಟ್ ಅಸೋಸಿಯೇಷನ್ (ಎಐಎಂಎ) ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
'ದೇಶವೊಂದು ಆರ್ಥಿಕವಾಗಿ ದಿವಾಳಿಯಾಗುವಂತೆ ಮಾಡುವುದು, ಮಾಹಿತಿ ಹರಿವನ್ನು ತಡೆಯುವುದು, ಕಂಪ್ಯೂಟರ್ ವೈರಸ್ ಹಾಗೂ ಹೈಪರ್‌ಸಾನಿಕ್ ಕ್ಷಿಪಣಿಗಳಿಂದ ದಾಳಿಯೇ 'ಹೈಬ್ರಿಡ್ ವಿಧಾನ'ದ ಯುದ್ಧದ ತಂತ್ರಗಳಾಗಿವೆ ಎಂದು ಅವರು ಹೇಳಿದರು.
'ಈಗ ಮಾಹಿತಿ ತಂತ್ರಜ್ಞಾನವೇ ಎಲ್ಲರನ್ನು ಬೆಸೆದಿದೆ. ನಾವು ಬಳಸುವ ನೆಟ್‌ವರ್ಕ್ ಮೇಲೆ ನಡೆಯುವ ದಾಳಿಯು ನಮ್ಮ ವ್ಯವಸ್ಥೆಯನ್ನೇ ನಿಷ್ಕ್ರಿಯಗೊಳಿಸುತ್ತದೆ. ಹೀಗಾಗಿ ಮುಂದಿನ ದಿನಗಳಲ್ಲಿ ನಡೆಯುವ ಯುದ್ಧಗಳಲ್ಲಿ ಒಂದು ದೇಶ ಅಥವಾ ಒಂದು ಸಂಸ್ಥೆಯೇ ಶತ್ರುವಾಗಿರಬೇಕಿಲ್ಲ' ಎಂದು ಅವರು ಪ್ರತಿಪಾದಿಸಿದರು.