ಕಾಸರಗೋಡು: ಬಿರು ಬಿಸಿಲಿನ ಬೇಗೆಯಿಂದ ಕಂಗೆಟ್ಟಿದ್ದ ಜನತೆಗೆ ತಂಪೆರಚಲೋ ಎಂಬಂತೆ ನಿನ್ನೆ ಸಂಕಜೆಯಿಂದ ಭಾರೀ ಮಳೆಯಾಗಿದೆ. ಅರಬ್ಬೀ ಸಮುದ್ರದಲ್ಲಿ ಹುಟ್ಟಿದ ಚಂಡಮಾರುತದ ಕಾರಣ ಕೇರಳ ಕರಾವಳಿಯಾದ್ಯಂತ ಮಳೆಯಾಗಿದೆ. ಸಂಜೆ 6.30 ರಿಂದ ಆರಂಭಗೊಂಡ ಬಿರುಸಿನ ಮಳೆ ರಾತ್ರಿ ಹತ್ತರ ಬಳಿಕ ನಿಧಾನಗೊಂಡು ಮುಂಜಾನೆಯವರೆಗೂ ಎಲ್ಲೆಡೆ ಮಳೆಯಾಗಿದೆ.
ತೀವ್ರ ಮಳೆಯಿಂದ ರಾ.ಹೆದ್ದಾರಿ ಮೊಗ್ರಾಲ್ ನಲ್ಲಿ ಮರವೊಂದು ಹಠಾತ್ ಉರುಳಿ ಅಟೋರಿಕ್ಷಾವೊಂದು ಹಾನಿಗೊಂಡಿದೆ. ಬಳಿಕ ಗಂಟೆಗಳಷ್ಟು ಕಾಲ ಹೆದ್ದಾರಿ ಸಂಚಾರ ಅಸ್ತವ್ಯಸ್ತಗೊಂಡಿತು. ಬಳಿಕ ಅಗ್ನಿ ಶಾಮಕದಳ ಆಗಮಿಸಿ ಸಮಸ್ಯೆ ಪರಿಹರಿಸಿತು.
ಜಿಲ್ಲೆಯ ಹಲವೆಡೆ ಹಾನಿಗಳು ಉಂಟಾಗಿದ್ದು ಮಾಹಿತಿಗಳು ಇನ್ನಷ್ಟೇ ಲಭ್ಯವಾಗಬೇಕಿದೆ. ಮಳೆ ಆರಂಭಗೊಂಡ ತಕ್ಷಣ ವಿದ್ಯುತ್ ಸಂಪೂರ್ಣ ಮೊಟಕುಗೊಂಡಿತು.