ತಿರುವನಂತಪುರ: ರಸ್ತೆಯಲ್ಲಿ ಕ್ಯಾಮೆರಾ ಇರುವ ಜಾಗಕ್ಕೆ ತಲುಪಿದಾಗ ಒಂದಿಷ್ಟು ವೇಗ ಹೆಚ್ಚಿಸದರೂ ಕ್ಯಾಮೆರಾ ಕಣ್ಣುಗಳಿನ್ನು ನಿಮ್ಮನ್ನು ಪತ್ತೆಹಚ್ಚಬಲ್ಲದು. ಅತಿವೇಗದ ವಹಾನ ಚಲಾವಣೆ ಮೂಲಕ ಕ್ಯಾಮರಾ ವಂಚನೆ ತಡೆಯಲು ಮೋಟಾರು ವಾಹನ ಇಲಾಖೆಯ ಅತ್ಯಾಧುನಿಕ ವರ್ಚುವಲ್ ಲೂಪ್ ವ್ಯವಸ್ಥೆ, ಕಣ್ಗಾವಲು ಕ್ಯಾಮೆರಾಗಳನ್ನು ಕಂಪ್ಯೂಟರ್ ಗೆ ಜೋಡಿಸುವ ವ್ಯವಸ್ಥೆಯನ್ನು ರಾಜ್ಯಾದ್ಯಂತ ಜಾರಿಗೆ ತರುತ್ತಿದೆ.
ಎರಡು ಕಣ್ಗಾವಲು ಕ್ಯಾಮೆರಾಗಳ ನಡುವೆ ವಾಹನ ಚಲಿಸುವ ವೇಗವನ್ನು ಕಂಪ್ಯೂಟರ್‍ನಿಂದ ವಿಶ್ಲೇಷಿಸಿ ವೇಗವನ್ನು ಪತ್ತೆ ಮಾಡಲಾಗುತ್ತದೆ. ಕೇಂದ್ರ ಸರ್ಕಾರದ ಈ ಯೋಜನೆ ಮೊದಲು ಜಾರಿಗೆ ಬರುತ್ತಿರುವುದು ಕೇರಳದಲ್ಲಿ. ಪ್ರಸ್ತುತ ಇದನ್ನು ತ್ರಿಶೂರ್-ಪಾಲಕ್ಕಾಡ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಳವಡಿಸಲಾಗುತ್ತಿದೆ.
ಹೆಲ್ಮೆಟ್ ಇಲ್ಲದೇ ಬೈಕ್ ಓಡಿಸಿದರೂ ಕ್ಯಾಮೆರಾ ಕಣ್ಣಿಗೆ ಬೀಳುತ್ತದೆ. ಕೇಂದ್ರ ಸಾರಿಗೆ ಸಚಿವಾಲಯದ ಪರಿವಾಹನ್ ಸೈಟ್‍ನಲ್ಲಿ ಮಾಹಿತಿ ಲಭ್ಯವಿದೆ. ಮಾಲೀಕರು ಶೀಘ್ರದಲ್ಲೇ ತಮ್ಮ ಮೊಬೈಲ್ ಫೆÇೀನ್‍ನಲ್ಲಿ ಮಾಹಿತಿಯನ್ನು ಸ್ವೀಕರಿಸುತ್ತಾರೆ ಮತ್ತು ಕೊಚ್ಚಿಯಲ್ಲಿರುವ ವರ್ಚುವಲ್ ಕೋರ್ಟ್‍ಗೆ ತೆರಳಬೇಕಾಗುತ್ತದೆ. ಎರಡನೇ ಬಾರಿ ತಪ್ಪು ಪುನರಾವರ್ತನೆಯಾದರೆ ಸಾವಿರ ರೂ.ದಂಡ ವಿಧಿಸಲಾಗುತ್ತದೆ. ಮೂರನೇ ಬಾರಿ ಪುನರಾವರ್ತಿಸಿದರೆ ಪರವಾನಗಿಯನ್ನು ಕಡಿತಗೊಳಿಸಲಾಗುತ್ತದೆ. ಉಲ್ಲಂಘನೆಯ ಫೆÇೀಟೋ ಸಾಕ್ಷ್ಯಗಳನ್ನು ಸಂಗ್ರಹಿಸಿ ತಕ್ಷಣವೇ ಕ್ರಮ ಕೈಗೊಳ್ಳಲಾಗುವುದು. ಎಲ್ಲಾ ಜಿಲ್ಲೆಗಳಲ್ಲಿ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಲಾಗಿದೆ. ರಾಜ್ಯ ಮಟ್ಟದಲ್ಲಿ ಸಮನ್ವಯ ಕ್ರಮಗಳು ಪ್ರಗತಿಯಲ್ಲಿವೆ.