ಚಂಡೀಗಡ: ಕೇಂದ್ರಾಡಳಿತ ಪ್ರದೇಶವಾದ ಚಂಡೀಗಡವನ್ನು ಪಂಜಾಬ್‌ಗೆ ವರ್ಗಾಯಿಸುವ ಸಂಬಂಧ ಪಂಜಾಬ್ ವಿಧಾನಸಭೆ ಕೈಗೊಂಡ ನಿರ್ಣಯದ ವಿರುದ್ಧ ಹರಿಯಾಣ ವಿಧಾನಸಭೆ ಮಂಗಳವಾರ ಸರ್ವಾನುಮತದಿಂದ ನಿರ್ಣಯವೊಂದನ್ನು ಅಂಗೀಕರಿಸಿದೆ.
ಚಂಡೀಗಡ: ಕೇಂದ್ರಾಡಳಿತ ಪ್ರದೇಶವಾದ ಚಂಡೀಗಡವನ್ನು ಪಂಜಾಬ್‌ಗೆ ವರ್ಗಾಯಿಸುವ ಸಂಬಂಧ ಪಂಜಾಬ್ ವಿಧಾನಸಭೆ ಕೈಗೊಂಡ ನಿರ್ಣಯದ ವಿರುದ್ಧ ಹರಿಯಾಣ ವಿಧಾನಸಭೆ ಮಂಗಳವಾರ ಸರ್ವಾನುಮತದಿಂದ ನಿರ್ಣಯವೊಂದನ್ನು ಅಂಗೀಕರಿಸಿದೆ.
ಸುಮಾರು ಮೂರು ಗಂಟೆಗಳ ಚರ್ಚೆಯ ನಂತರ ಸರ್ಕಾರದ ಈ ನಿರ್ಣಯವನ್ನು ಸರ್ವಾನುಮತದ ಅಂಗೀಕರಿಸಲಾಯಿತು.
'ಚಂಡೀಗಡವನ್ನು ಶೀಘ್ರವೇ ಪಂಜಾಬ್‌ಗೆ ಸೇರಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಶಿಫಾರಸು ಮಾಡುವುದಾಗಿ ಪಂಜಾಬ್ ಸರ್ಕಾರ ಕೈಗೊಂಡಿರುವ ನಿರ್ಣಯವನ್ನು ಹರಿಯಾಣ ವಿರೋಧಿಸುತ್ತದೆ. ಇದು ರಾಜ್ಯದ ಜನತೆಗೆ ಸ್ವೀಕಾರಾರ್ಹವಲ್ಲ' ಎಂದು ಮುಖ್ಯಮಂತ್ರಿ ಮನೋಹರಲಾಲ್ ಖಟ್ಟರ್ ಅವರು ನಿರ್ಣಯವನ್ನು ವಿಧಾನಸಭೆಯಲ್ಲಿ ಮಂಡಿಸಿದ್ದರು.
ಕೇಂದ್ರದ ಸೇವಾ ನಿಯಮಗಳು ಕೇಂದ್ರಾಡಳಿತ ಪ್ರದೇಶ ಚಂಡೀಗಡದಲ್ಲಿನ ಉದ್ಯೋಗಿಗಳಿಗೂ ಅನ್ವಯಿಸುತ್ತವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಇತ್ತೀಚಿಗೆ ಹೊರಡಿಸಿದ ಪ್ರಕಟಣೆಯು ರಾಜಕೀಯ ತಿಕ್ಕಾಟಕ್ಕೆ ಕಾರಣವಾಗಿದೆ.