ಕೋಝಿಕ್ಕೋಡ್: ಕೋಝಿಕ್ಕೋಡ್ ಜಿಲ್ಲೆಯಲ್ಲಿ ಮತ್ತೆ ಶಿಗೆಲ್ಲ ದೃಢಪಟ್ಟಿದೆ. ಪುತಿಯಪ್ಪನ ಎಂಬಲ್ಲಿ ಬುಧವಾರ ರೋಗ ಪತ್ತೆಯಾಗಿದೆ. ಏಳು ವರ್ಷದ ಬಾಲಕಿಗೆ ಕಾಯಿಲೆ ಇರುವುದು ಪತ್ತೆಯಾಗಿದ್ದು, ಮತ್ತೊಬ್ಬಳಲ್ಲಿ ರೋಗಲಕ್ಷಣಗಳಿವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಆರೋಗ್ಯ ಇಲಾಖೆ ಪ್ರಕಾರ ಸದ್ಯ ರೋಗ ಹರಡುತ್ತಿಲ್ಲ.
ಕಳೆದ ಡಿಸೆಂಬರ್‍ನಲ್ಲಿ ಕೋಝಿಕ್ಕೋಡ್‍ನಲ್ಲಿ ಶಿಗೆಲ್ಲಾ ದೃಢಪಟ್ಟಿತ್ತು. ಅಂದು ಸುಮಾರು 50 ಮಂದಿಗೆ ರೋಗ ಪತ್ತೆಯಾಗಿತ್ತು. ನೀರಿನ ಮೂಲಕ ರೋಗ ಹರಡುತ್ತಿತ್ತು ಎನ್ನಲಾಗಿದೆ. ಕೋಝಿಕ್ಕೋಡ್ ಕಾಪೆರ್Çರೇಷನ್ ವ್ಯಾಪ್ತಿಯ ಕೊಟ್ಟಂಪರಂಬು ಮುಂಡಿಕಲ್ತಝಂನ ಕೆಲವು ಭಾಗದಲ್ಲಿ ಈ ರೋಗ ಕಂಡುಬಂದಿದೆ.
ಶಿಗೆಲ್ಲ ಬ್ಯಾಕ್ಟೀರಿಯಾದ ಸೋಂಕಿನ ಮುಖ್ಯ ಲಕ್ಷಣವೆಂದರೆ ಸಾಮಾನ್ಯಕ್ಕಿಂತ ಹೆಚ್ಚು ತೀವ್ರವಾದ ಅತಿಸಾರ. ನೀರು ಮತ್ತು ಕಲುಷಿತ ಆಹಾರದ ಮೂಲಕ ಬ್ಯಾಕ್ಟೀರಿಯಾ ಹರಡಬಹುದು. ಮಕ್ಕಳಲ್ಲಿ ಈ ರೋಗ ವರದಿಯಾದರೆ ಸಾವಿನ ಅಪಾಯ ಹೆಚ್ಚಾಗಿರುತ್ತದೆ ಎಂಬುದು ಸಂಶೋಧನೆ ತಿಳಿಸುತ್ತದೆ.
ರೋಗಿಗಳ ಮಲವಿಸರ್ಜನೆಯ ಸಂಪರ್ಕಕ್ಕೆ ಬಂದರೆ ರೋಗವು ವೇಗವಾಗಿ ಹರಡುತ್ತದೆ. ಸಾಕಷ್ಟು ಗಮನ ನೀಡದಿದ್ದರೂ, ರೋಗದ ಹರಡುವಿಕೆ ಹೆಚ್ಚಾಗುತ್ತದೆ. ಅತಿಸಾರ, ಜ್ವರ, ಹೊಟ್ಟೆ ನೋವು, ವಾಂತಿ, ಆಯಾಸ ಮತ್ತು ರಕ್ತಸಿಕ್ತ ಮಲ ಲಕ್ಷಣಗಳಾಗಿವೆ.