ಬದಿಯಡ್ಕ: ಕುಂಬ್ಡಾಜೆ ಪೊಡಿಪ್ಪಳ್ಳ ಶ್ರೀ ಚೀರುಂಬಾ ಭಗವತಿ ಕ್ಷೇತ್ರ ವ್ಯಾಪ್ತಿಯ ಚೆಡೇಕಲ್ ಕುನ್ನಿಲ್ ಶ್ರೀ ವಯನಾಡ್ ಕುಲವನ್ ತರವಾಡು ದೈವಸ್ಥಾನದಲ್ಲಿ ಕೈವೀದ್ ಹಾಗೂ ದೈವಕೋಲ ಏ. 7,8 ರಂದು (ಗುರುವಾರ,ಶುಕ್ರವಾರ) ರಂದು ಜರಗಲಿದೆ. ಕಾರ್ಯಕ್ರಮದ ಅಂಗವಾಗಿ 7 ರಂದು ಗುರುವಾರ ಸಂಜೆ ಕೈವೀದ್, ತೈಯ್ಯಂ ಕೂಡಲ್ ರಾತ್ರಿ 10 ಗಂಟೆಗೆ ವಿಷ್ಣುಮೂರ್ತಿ ಹಾಗೂ ಪೆÇಟ್ಟನ್ ದೈವದ ತೊಡಙಲ್, ರಾತ್ರಿ 11 ಗಂಟೆಗೆ ಪಡುಞರ್ ಚಾಮುಂಡಿ ದೈವ ತೊಡಙಲ್ ಬಳಿಕ ಮೋಂದಿಕೋಲ ನಡೆಯಲಿದೆ. ರಾತ್ರಿ 2 ರಿಂದ ಪೊಟ್ಟನ್ ತೈಯ್ಯಂ, ಬೆಳಗ್ಗೆ 5 ಕ್ಕೆ ಕೊರತ್ತಿಯಮ್ಮ ಕೋಲ, ಬೆಳಗ್ಗೆ 11 ಕ್ಕೆ ವಿಷ್ಣುಮೂರ್ತಿ ದೈವಕೋಲ ನಡೆಯಲಿದೆ. 11.30 ಕ್ಕೆ ಪಡಿಞರ್ ಚಾಮುಂಡಿ ದೈವಕೋಲ, ಪ್ರಸಾದ ವಿತರಣೆಯೊಂದಿಗೆ ಸಂಪನ್ನಗೊಳ್ಳಲಿದೆ.