ನವದೆಹಲಿ: ಕರೊನಾ ವೈರಸ್ನ ಇತರ ರೂಪಾಂತರಿಗಳಿಗಿಂತ ಒಮಿಕ್ರಾನ್ ಪ್ರಭೇದವು ಮಕ್ಕಳ ಶ್ವಾಸನಾಳದ ಮೇಲ್ಭಾಗದಲ್ಲಿ ಸೋಂಕು (ಅಪ್ಪರ್ ಏರ್ವೇ ಇನ್ಫೆಕ್ಷನ್-ಯುಎಐ) ಹರಡುವ ಸಾಧ್ಯತೆ ಅಧಿಕವಾಗಿದೆ. ಇದರಿಂದ ಹೃದಯಾಘಾತ ಮತ್ತಿತರ ಗಂಭೀರ ಸಮಸ್ಯೆ ಉದ್ಭವವಾಗಬಹುದು ಎಂದು ಅಧ್ಯಯನವೊಂದು ಹೇಳಿದೆ.

ಅಮೆರಿಕದ ಯುನಿವರ್ಸಿಟಿ ಆಫ್ ಕೊಲರಾಡೊ, ನಾರ್ತ್ ವೆಸ್ಟರ್ನ್ ಯುನಿವರ್ಸಿಟಿ ಮತ್ತು ಸ್ಟಾಯನಿ ಬ್ರೂಕ್ ಯುನಿವರ್ಸಿಟಿಯ ಸಂಶೋಧಕರ ಅಧ್ಯಯನದಿಂದ ಈ ಅಂಶ ತಿಳಿದು ಬಂದಿದೆ. 19 ವರ್ಷ ಕೆಳಗಿನ 18,849 ಕೋವಿಡ್ ಸೋಂಕಿತ ಮಕ್ಕಳನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. 'ಜೆಎಎಂಎ ಪೀಡಿಯಾಟ್ರಿಕ್ಸ್' ಪತ್ರಿಕೆಯಲ್ಲಿ ಅಧ್ಯಯನ ವರದಿ ಪ್ರಕಟಗೊಂಡಿದೆ. ಅಮೆರಿಕದಲ್ಲಿ ನಿರ್ದಿಷ್ಟವಾಗಿ ಒಮಿಕ್ರಾನ್ ತಳಿ ಹೆಚ್ಚಾದ ನಂತರ ಮಕ್ಕಳಲ್ಲಿ ಯುಎಐ ಪ್ರಕರಣಗಳು ಏರಿಕೆಯಾದವೇ ಎನ್ನುವುದನ್ನು ತಿಳಿಯಲು ಸಂಶೋಧಕರು ಈ ಅಧ್ಯಯನ ನಡೆಸಿದ್ದರು.
ನಿತ್ಯವೂ ಅಪ್ಡೇಟ್ಗೆ ಕೇರಳಕ್ಕೆ ಸೂಚನೆ: ಕರೊನಾ ಸಾಂಕ್ರಾಮಿಕತೆ ಕುರಿತ ರಾಜ್ಯ ಮಟ್ಟದ ದೈನಿಕ ಮಾಹಿತಿಯನ್ನು 5 ದಿನಗಳ ಅಂತರದ ನಂತರ ದಾಖಲಿಸಿರುವ ಕೇರಳದ ನಡೆಗೆ ಅತೃಪ್ತಿ ವ್ಯಕ್ತಪಡಿಸಿರುವ ಕೇಂದ್ರ ಸರ್ಕಾರ, ನಿತ್ಯವೂ ಮಾಹಿತಿ ಒದಗಿಸುವಂತೆ ರಾಜ್ಯಕ್ಕೆ ಸೂಚಿಸಿದೆ. ಕೇರಳ ಏಪ್ರಿಲ್ 13ರಂದು ಕೊನೆಯ ಬಾರಿಗೆ ದೈನಿಕ ಮಾಹಿತಿಯನ್ನು ಕೇಂದ್ರಕ್ಕೆ ಒದಗಿಸಿತ್ತು.