ಮುಳ್ಳೇರಿಯ: ಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀರಾಮಚಂದ್ರಾಪುರಮಠದ ಅಂಗಸಂಸ್ಥೆ ಸಮರಸ ಟ್ರಸ್ಟಿನ ಕಾರ್ಯಕಾರಿ ಸಮಿತಿ ಮತ್ತು ಮಾರ್ಗದರ್ಶಕ ಸಮಿತಿಯ ಜಂಟಿ ಸಭೆ ಮುಳ್ಳೇರಿಯಾ ಮಂಡಲ ಕಛೇರಿಯಲ್ಲಿ ಇತ್ತೀಚೆಗೆ ನಡೆಯಿತು.
ಟ್ರಸ್ಟಿನ ಅಧ್ಯಕ್ಷ ಡಾ . ವಿ ವಿ ರಮಣ ಅವರು ಅಧ್ಯಕ್ಷತೆ ವಹಿಸಿದ್ದರು. ಮಾರ್ಗದರ್ಶಕ ಸಮಿತಿಯ ಸದಸ್ಯ ಮತ್ತು ಮುಳ್ಳೇರಿಯಾ ಹವ್ಯಕ ಮಂಡಲಾಧ್ಯಕ್ಷ ಬಾಲಸುಬ್ರಹ್ಮಣ್ಯ ಭಟ್ ಸರ್ಪಮಲೆ ಅವರು ಸೂಕ್ತ ಮಾರ್ಗದರ್ಶನಗಳನ್ನಿತ್ತರು.
ಶ್ರೀಗಳವರ ಸೂಚನೆಯಂತೆ ಸಮರಸ ಭೂಮಿಯಲ್ಲಿ ಸಾನಿಧ್ಯ ವರ್ಧನೆಗಾಗಿ ಮುಂದಿನ ದಿನಗಳಲ್ಲಿ ಕಾರ್ಯಕರ್ತರನ್ನು ಒಡಗೂಡಿಕೊಂದು ವಿವಿಧ ಧಾರ್ಮಿಕ ಉಪಾಸನೆ, ಮಾಡುವುದರೊಂದಿಗೆ ನಿರಂತರ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಂಡು ಸಂಕಲ್ಪದ ಈಡೇರಿಕೆಗೆ ಮುಂದರಿಯಲು ಸಭೆಯಲ್ಲಿ ಸಮಾಲೋಚಿಸಿ ತೀರ್ಮಾನಿಸಲಾಯಿತು.
ಶಾಸನತಂತ್ರದ ಪ್ರಕಲ್ಪಖಂಡದ ನಿರ್ಮಾಣ ಉಪಖಂಡದ ಸಂಯೋಜಕ, ವಿ ವಿ ವಿ ಯ ನಿರ್ಮಿತಿ ಪರಿಷತ್ತಿನ ನಿರ್ಮಾಣದ ಪ್ರಧಾನ ಸಂಚಾಲಕ ಮತ್ತು ಸಮರಸ ಟ್ರಸ್ಟಿನ ಮಾರ್ಗದರ್ಶಕ ಸಮಿತಿಯ ಸದಸ್ಯರೂ ಆದ ಕೆ ಯನ್ ಭಟ್ ಬೆಳ್ಳಿಗೆ ಅವರ ನಿರ್ದೇಶನದಲ್ಲಿ ಸಮರಸ ಭೂಮಿಯಲ್ಲಿ ತಾತ್ಕಾಲಿಕ ಕಟ್ಟಡವನ್ನು ನಿರ್ಮಿಸಲು ಯೋಜನೆ ರೂಪಿಸಲಾಯಿತು.
ಜೊತೆ ಕಾರ್ಯದರ್ಶಿ ನವನೀತ ಪ್ರಿಯ ಕೈಪ್ಪಂಗಳ, ಮಂಡಲ ಮಾತೃಪ್ರಧಾನೆ ಸದಸ್ಯೆ ಹಾಗೂ ಸಮರಸ ಟ್ರಸ್ಟ್ ಸದಸ್ಯೆ ಗೀತಾಲಕ್ಷ್ಮಿ ಅನಘಾ, ಮಾರ್ಗದರ್ಶಕ ಸಮಿತಿಯ ಸದಸ್ಯ ಗೋವಿಂದ ಬಳ್ಳಮೂಲೆ ಉಪಸ್ಥಿತರಿದ್ದರು. ಕಾರ್ಯದರ್ಶಿ ರಾಜಗೋಪಾಲ ಕೈಪ್ಪಂಗಳ ಕಾರ್ಯಕ್ರಮ ಸಂಯೋಜಿಸಿದರು.