ಕಾಸರಗೋಡು: ಎಂಡೋಸಲ್ಫಾನ್ ಸಂತ್ರಸ್ತರು ತಮ್ಮ ಬದಲಾದ ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ತಕ್ಷಣ ಎಂಡೋಸಲ್ಫಾನ್ ಸೆಲ್‍ಗೆ ನೀಡುವಂತೆ ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರ್‍ಚಂದ್ ತಿಳಿಸಿದ್ದಾರೆ. ಎಂಡೋಸಲ್ಫಾನ್ ಸಂತ್ರಸ್ತರ ಪಟ್ಟಿಯನ್ನು ಪರಿಶೀಲಿಸುವ ಸಂದರ್ಭ ಕೆಲವರು ವಾಸಸ್ಥಳ ಬದಲಾಯಿಸಿದ್ದು, ವಿಳಾಸ ಬದಲಾಗಿರುವುದು ಕಂಡುಬಂದಿದೆ. ತಮ್ಮ ಹೊಸ ವಿಳಾಸಗಳನ್ನು ಎಂಡೋಸಲ್ಫಾನ್ ಸೆಲ್ ಅಥವಾ ಜಿಲ್ಲಾಧಿಕಾರಿಗಳ ತಾಲೂಕು ಕಚೇರಿಗೆ ನೀಡಬೇಕು ಎಂದು ಪ್ರಕಟಣೆ ತಿಳಿಸಿದೆ.