ಮುಂಬೈ: ಶ್ರೀರಾಮನ ಹೆಸರಿನಲ್ಲಿ ಕೋಮು ಬೆಂಕಿ ಹಚ್ಚುವುದು ರಾಮನ ಕಲ್ಪನೆಗೆ ಮಾಡಿದ ಅವಮಾನ ಎಂದು ಶಿವಸೇನೆ ನಾಯಕ ಸಂಜಯ್ ರಾವತ್ ಕಿಡಿಕಾರಿದ್ದಾರೆ. ಮಧ್ಯಪ್ರದೇಶದ ಖಾರ್ಗೋನ್‌ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಭಗವಾನ್ ರಾಮನೂ ಚಡಪಡಿಸುತ್ತಾನೆ ಎಂದು ಭಾನುವಾರ ಹೇಳಿದ್ದಾರೆ. ರಾಮ ನವಮಿಯ ಮೆರವಣಿಗೆ ವೇಳೆ ಘರ್ಷಣೆಯಿಂದ ಕರ್ಫ್ಯೂ ವಿಧಿಸಲಾಗಿದ್ದು, ಮಧ್ಯಪ್ರದೇಶದಲ್ಲಿನ ಘರ್ಷಣೆ ಪ್ರಕರಣವನ್ನ ಟೀಕಿಸಿದ್ದಾರೆ.
ಚುನಾವಣೆ ಗೆಲ್ಲಲು ಧರ್ಮ ಕಲಹವನ್ನು ಬಿತ್ತುವ ತಂತ್ರವನ್ನು ಬಿಜೆಪಿ ಅನುಸರಿಸುತ್ತಿದೆ, ಎಂದು ಆರೋಪಿಸಿದರು.
ಶಿವಸೇನೆಯ ಮುಖವಾಣಿ 'ಸಾಮ್ನಾ'ದಲ್ಲಿ ತಮ್ಮ ಸಾಪ್ತಾಹಿಕ ಅಂಕಣದಲ್ಲಿ ರಾವತ್ ಈ ಬಗ್ಗೆ ಕಿಡಿಕಾರಿದ್ದು 'ಯಾರಾದರೂ ಮೂಲಭೂತವಾದದ ಬೆಂಕಿಯನ್ನು ಹೊತ್ತಿಸಲು ಮತ್ತು ಚುನಾವಣೆಯಲ್ಲಿ ಗೆಲ್ಲಲು ಶಾಂತಿಯನ್ನು ಕದಡಲು ಬಯಸಿದರೆ, ಅವರು ಎರಡನೇ ವಿಭಜನೆಯ ಬೀಜಗಳನ್ನು ಬಿತ್ತುತ್ತಿದ್ದಾರೆ' ಎಂದು ಬರೆದಿದ್ದಾರೆ. ಶಿವಸೇನೆ ನಾಯಕ ಸಂಜಯ್ ರಾವತ್ ಸಾಮ್ನಾ ಪತ್ರಿಕೆಯ ಕಾರ್ಯಕಾರಿ ಸಂಪಾದಕರಾಗಿದ್ದಾರೆ.
ಏಪ್ರಿಲ್ 10 ರಂದು ರಾಮ ನವಮಿಯಂದು ದೇಶದ ವಿವಿಧ ಭಾಗಗಳಲ್ಲಿ ಕೋಮು ಘರ್ಷಣೆಗಳನ್ನು ಉಲ್ಲೇಖಿಸಿದ ಸಂಜಯ್ ರಾವುತ್, ಇದು ಒಳ್ಳೆಯ ಲಕ್ಷಣವಲ್ಲ ಎಂದು ಹೇಳಿದ್ದಾರೆ. ಹಿಂದೆ, ರಾಮನವಮಿ ಮೆರವಣಿಗೆಗಳು ಸಂಸ್ಕೃತಿ ಮತ್ತು ಧರ್ಮಕ್ಕೆ ಸಂಬಂಧಿಸಿದ್ದವು. ಆದರೆ ಈಗ ಕತ್ತಿಗಳನ್ನು ಝಳಪಿಸಲಾಗುತ್ತಿದೆ. ಕೋಮು ವೈಷಮ್ಯವನ್ನು ಸೃಷ್ಟಿಸಲಾಗಿದೆ. ಮಸೀದಿಗಳ ಹೊರಗೆ ಹಿಂಸಾಚಾರಕ್ಕೆ ದಾರಿ ಮಾಡಿಕೊಡಲಾಗುತ್ತಿದೆ ಆರೋಪಿಸಿದರು.
ಬಿಜೆಪಿ ವಿರುದ್ಧ ವಾಗ್ದಾಳಿ ಮಾಡಿದ ಸಂಜಯ್ ರಾವತ್ ರಾಮಮಂದಿರ ಚಳವಳಿಯನ್ನು ಮಧ್ಯದಲ್ಲಿಯೇ ಕೈಬಿಟ್ಟವರು ಈಗ ಭಗವಾನ್ ರಾಮನ ಹೆಸರಿನಲ್ಲಿ ಕತ್ತಿಗಳನ್ನು ಪ್ರದರ್ಶಿಸುತ್ತಿದ್ದಾ. ಇದನ್ನು ಹಿಂದುತ್ವ ಎನ್ನಲಾಗದು, ರಾಮನ ಹೆಸರಿನಲ್ಲಿ ಕೋಮುವಾದದ ಬೆಂಕಿ ಹಚ್ಚುವುದು ರಾಮನ ಕಲ್ಪನೆಗೆ ಮಾಡಿದ ಅವಮಾನ ಎಂದು ಅವರು ಹೇಳಿದ್ದಾರೆ.
ಮಧ್ಯಪ್ರದೇಶದ ಖಾರ್ಗೋನ್‌ನಲ್ಲಿನ ಬೆಳವಣಿಗೆಗಳ ಬಗ್ಗೆ ಭಗವಾನ್ ರಾಮನು ಸಹ ಚಂಚಲನಾಗುತ್ತಾನೆ. ಹಿಂದೂ ಮತ್ತು ಮರಾಠಿ ಹೊಸ ವರ್ಷವನ್ನು ಗುರುತಿಸುವ ಏಪ್ರಿಲ್ 2 ರಂದು ಮುಂಬೈ ಸೇರಿದಂತೆ ಮಹಾರಾಷ್ಟ್ರದಲ್ಲಿ ಸಾಂಸ್ಕೃತಿಕ ಮೆರವಣಿಗೆಗಳನ್ನು ನಡೆಸಲಾಯಿತು. ಮೆರವಣಿಗೆಗಳು ಮುಸ್ಲಿಂ ಪ್ರದೇಶಗಳಲ್ಲಿ ಹಾದುಹೋದ ನಂತರವೂ ಯಾವುದೇ ಹಿಂಸಾಚಾರ ನಡೆದಿಲ್ಲ. ಆದರೆ ರಾಮನವಮಿಯಂದು ದೇಶದ ಹಲವೆಡೆ ಕೋಮು ಸಂಘರ್ಷಗಳು ಹೇಗೆ ನಡೆದವು? ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ತವರು ರಾಜ್ಯವಾದ ಗುಜರಾತ್‌ನಲ್ಲಿ ರಾಮನವಮಿ ಮೆರವಣಿಗೆಯ ಮೇಲೆ ಮುಸ್ಲಿಮರು ಕಲ್ಲು ತೂರುತ್ತಾರೆ ಎಂದು ಯಾರಾದರೂ ನಂಬಬಹುದೇ? ಎಂದು ಪ್ರಶ್ನಿಸಿದ್ದಾರೆ.