ಏಪ್ರಿಲ್ 22 ರಂದು ವಿಶ್ವ ಭೂಮಿ ದಿನದ ಆಚರಣೆಯು ಅತ್ಯಂತ ಮಹತ್ವದ್ದಾಗಿದೆ. ಏಕೆಂದರೆ, ಈ ಸಮಯದಲ್ಲಿ ಉತ್ತರ ಗೋಳಾರ್ಧದಲ್ಲಿ ವಸಂತಕಾಲ ಮತ್ತು ದಕ್ಷಿಣ ಗೋಳಾರ್ಧದಲ್ಲಿ ಶರತ್ಕಾಲವಿರುತ್ತದೆ. ಹಾಗಾಗಿ, ಹವಾಮಾನ ಸಹ ಸಹನೀಯವಾಗಿರುವುದರಿಂದ, ಭೂ ದಿನದ ಆಚರಣೆ ಹೆಚ್ಚು ಆಹ್ಲಾದಕರವಾಗಿರುತ್ತದೆ.
'ನಮ್ಮ ಗ್ರಹದಲ್ಲಿ ಹೂಡಿಕೆ ಮಾಡಿ' ಎಂಬುದು 2022ರ ಭೂಮಿ ದಿನದ ಥೀಮ್. 'ನಮ್ಮ ಭೂಮಿಯನ್ನು ಮರುಸ್ಥಾಪಿಸಿ' ಎಂಬುದು 2021ರ ಥೀಮ್ ಆಗಿತ್ತು.
ಭೂಮಿ ದಿನದ ಇತಿಹಾಸ
ಏಪ್ರಿಲ್ 22, 1970 ರಂದು ಭೂಮಿ ದಿನವನ್ನು ಮೊದಲ ಬಾರಿಗೆ ಆಚರಿಸಲಾಯಿತು.
ಸ್ಯಾನ್ ಫ್ರಾನ್ಸಿಸ್ಕೋದ ಯುನೆಸ್ಕೊ ಸಮ್ಮೇಳನದಲ್ಲಿ ಶಾಂತಿ ಹೋರಾಟಗಾರ ಜಾನ್ ಮೆಕ್ ಕಾನ್ನೆಲ್ ಮಾತೃ ಭೂಮಿ ಮತ್ತು ಶಾಂತಿಯ ಪರಿಕಲ್ಪನೆಯನ್ನು ಗೌರವಿಸಲು ಒಂದು ದಿನ ಬೇಕೆಂದು ಪ್ರಸ್ತಾಪಿಸಿದ್ದರು. ಬಳಿಕ, ಮಾರ್ಚ್ 21, 1970ರಂದು ಉತ್ತರ ಗೋಳಾರ್ಧದಲ್ಲಿ ವಿಶ್ವ ಭೂ ದಿನವನ್ನು ವಸಂತ ದಿನವಾಗಿ ಆಚರಿಸಲು ನಿರ್ಧರಿಸಲಾಗಿತ್ತು. ಆ ನಂತರ, ಅಮೆರಿಕದ ಸೆನೆಟ್ ಸದಸ್ಯ ಗೇಲಾರ್ಡ್ ನೆಲ್ಸನ್ ಅವರು ಏಪ್ರಿಲ್ 22, 1970 ರಂದು ರಾಷ್ಟ್ರವ್ಯಾಪಿ ಪರಿಸರ ಜ್ಞಾನೋದಯ ದಿನವನ್ನು ಆಚರಿಸಲು ಪ್ರಸ್ತಾವನೆ ಇಟ್ಟಿದ್ದರು. ನಂತರ ಅದನ್ನು 'ಅರ್ಥ್ ಡೇ' ಎಂದು ಮರುನಾಮಕರಣ ಮಾಡಲಾಯಿತು.
ಭೂಮಿಯ ದಿನವನ್ನು ಏಕೆ ಆಚರಿಸಲಾಗುತ್ತದೆ?
ಜಾಗತಿಕ ತಾಪಮಾನ ಏರಿಕೆ, ಮಾಲಿನ್ಯ ಹೆಚ್ಚಳ ಇವೇ ಮುಂತಾದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಮತ್ತು ಸಮಕಾಲೀನ ಹಾಗೂ ಹೊಸ ಪೀಳಿಗೆಯಲ್ಲಿ ಜಾಗೃತಿ ಮೂಡಿಸುವ ಉದ್ದೇಶವನ್ನು ಈ ದಿನ ಒಳಗೊಂಡಿದೆ. ವಿಶ್ವ ಭೂಮಿಯ ದಿನದಂದು ಪರಿಸರ ಸಮಸ್ಯೆಗಳ ಕುರಿತಂತೆ ಚರ್ಚಿಸಲು ಲಕ್ಷಾಂತರ ಜನರು ಒಟ್ಟಿಗೆ ಸೇರುತ್ತಾರೆ. ಈ ದಿನದ ಹೆಸರಲ್ಲಿ ವಿವಿಧ ಹವಾಮಾನ ಸಮಸ್ಯೆಗಳ ಬಗ್ಗೆ ಜನರಿಗೆ ಶಿಕ್ಷಣ ನೀಡಲು, ಪರಿಸರ ಸಾಕ್ಷರತೆಯ ವಿಷಯಗಳ ಕುರಿತು ಚರ್ಚೆಗಳನ್ನು ನಡೆಸಲು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.
ಭೂಮಿಯ ದಿನ 2022 ಶುಭಾಶಯಗಳು
ನಾವೆಲ್ಲರೂ ಪ್ರತಿ ವರ್ಷ ಒಂದು ಮರವನ್ನು ನೆಡುವ ಭರವಸೆ ನೀಡೋಣ ಮತ್ತು ನಾವು ಬದುಕಲು ಹೆಚ್ಚು ಹಸಿರು ಮತ್ತು ಸಂತೋಷದ ಗ್ರಹವನ್ನು ಹೊಂದುತ್ತೇವೆ.
ನಮಗೆ ಇರುವುದು ಒಂದೇ ಭೂಮಿ. ನಮ್ಮ ಮುಂದಿನ ಪೀಳಿಗೆಗೆ ಅದನ್ನು ಆರೋಗ್ಯಕರವಾಗಿ ಮತ್ತು ಸುರಕ್ಷಿತವಾಗಿರಿಸುವ ಮಹತ್ವವನ್ನು ಈ ದಿನವು ನಮಗೆ ನೆನಪಿಸುತ್ತದೆ ಎಂದು ನಾನು ಭಾವಿಸುತ್ತೇನೆ. ನಿಮಗೆ ಭೂಮಿಯ ದಿನದ ಶುಭಾಶಯಗಳು!
ನಮ್ಮ ಮುಂದಿನ ಪೀಳಿಗೆಗೆ ಭೂಮಿಯನ್ನು ಆರೋಗ್ಯಕರ ರೂಪದಲ್ಲಿ ಹಸ್ತಾಂತರಿಸುವುದು ನಮ್ಮ ಜವಾಬ್ದಾರಿಯಾಗಿದೆ. ಅದನ್ನು ಉತ್ತಮ ಸ್ಥಳವನ್ನಾಗಿ ಮಾಡಲು ನಾವು ಒಟ್ಟಾಗಿ ಕೆಲಸ ಮಾಡೋಣ. ಭೂಮಿಯ ದಿನದ ಶುಭಾಶಯಗಳು!
ನಿಮಗೆ ಭೂಮಿಯ ದಿನದ ಶುಭಾಶಯಗಳು! ನಿಮ್ಮ ಆಶೀರ್ವಾದವು ಈ ಭೂಮಿಯಂತೆ ಶ್ರೇಷ್ಠವಾಗಿರಲಿ!
ಭೂಮಿಯ ಸೌಂದರ್ಯವು ಅದರ ಸರಳತೆ ಮತ್ತು ನೈಸರ್ಗಿಕ ನೋಟದಲ್ಲಿದೆ. ಅದರ ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸಲು ಮತ್ತು ಅವನತಿಯಿಂದ ರಕ್ಷಿಸಲು ನಾವು ಪ್ರತಿಜ್ಞೆ ಮಾಡೋಣ. ಭೂಮಿಯ ದಿನದ ಶುಭಾಶಯಗಳು!
ಭೂಮಿಯ ದಿನ 2022 ಘೋಷಣೆಗಳು
ನಮ್ಮ ಪರಿಸರ ವಿಜ್ಞಾನಕ್ಕೆ ನಮ್ಮಿಂದ ತಾಳ್ಮೆ ಬೇಕು.
ಪ್ರಕೃತಿಯನ್ನು ಪೋಷಿಸಿ.
ಮಾಲಿನ್ಯ ಎಂದಿಗೂ ಪರಿಹಾರವಲ್ಲ.
ಭೂಮಿಯನ್ನು ಸ್ವಚ್ಛವಾಗಿ ಮತ್ತು ಹಸಿರಾಗಿಡಿ.
ದಿನದಲ್ಲಿ ಒಂದು ಬೀಜವನ್ನು ಬಿತ್ತಿದರೆ ಮಾಲಿನ್ಯವನ್ನು ದೂರವಿಡುತ್ತದೆ.
ಭೂಮಿಯನ್ನು ಉಳಿಸಿ ಮತ್ತು ಭವಿಷ್ಯವನ್ನು ಉಳಿಸಿ.