ಕಾಸರಗೋಡು: ಆಹಾರ ಸ್ವಾವಲಂಬನೆ, ಸುರಕ್ಷಿತ ಆಹಾರ ಉತ್ಪಾದನೆ ಹಾಗೂ ಕುಟುಂಬಗಳನ್ನು ಕೃಷಿಯಲ್ಲಿ ತೊಡಗಿಸಿಕೊಳ್ಳಲು ಸಹಾಯವಾಗುವ ನಿಟ್ಟಿನಲ್ಲಿ 'ನಾವೂ ಕೃಷಿಗೆ ಹೋಗೋಣ'ಯೋಜನೆಯ ರಾಜ್ಯ ಮಟ್ಟದ ಉದ್ಘಾಟನೆಯನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೆರವೇರಿಸಿದರು.
ಈ ಸಂದರ್ಭ ಪಳ್ಳಿಕ್ಕರ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಕುಮಾರನ್ ಅವರು ತರಕಾರಿ ಸಸಿಗಳನ್ನು ನೆಡುವ ಮೂಲಕ ಪಂಚಾಯಿತಿ ವ್ಯಾಪ್ತಿಯಲ್ಲಿ ಯೋಜನೆಗೆ ಚಾಲನೆ ನೀಡಿದರು. ಕೃಷಿ ಅಧಿಕಾರಿ ವೇಣುಗೋಪಾಲ್, ಕೃಷಿ ಸಹಾಯಕ ಮಧುಸೂದನನ್, ಉಪಾಧ್ಯಕ್ಷ ನಸ್ರೀನ್ ವಹಾಬ್, ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಸೂರಜ್ ಮತ್ತು ಮಂಡಳಿಯ ಇತರ ಸದಸ್ಯರು ತರಕಾರಿ ತೋಟ ನಿರ್ಮಾಣ ಕಾರ್ಯದಲ್ಲಿ ಕೈಜೋಡಿಸಿದರು. ಪ್ರತಿಯೊಬ್ಬ ಕೇರಳೀಯನಲ್ಲೂ ಕೃಷಿ ಸಂಸ್ಕøತಿಯನ್ನು ಜಾಗೃತಗೊಳಿಸುವ ಹಾಗೂ ಸದೃಢ ಕೃಷಿ ಕ್ಷೇತ್ರವನ್ನು ರೂಪಿಸುವ ಉದ್ದೇಶದಿಂದ 'ನಾವೂ ಕೃಷಿಗೆ ಹೋಗೋಣ' ಎಂಬ ವಿಶಿಷ್ಟ ಯೋಜನೆಯನ್ನು ಕೃಷಿ ಇಲಾಖೆ ಜಾರಿಗೆ ತಂದಿದೆ.