ಬೀಜಿಂಗ್ : ಚೀನಾದ ಶಾಂಘಾಯ್ ನಗರದಲ್ಲಿ ಕೋವಿಡ್ ಪ್ರಕರಣಗಳ ಏರಿಕೆ ಹಿನ್ನೆಲೆಯಲ್ಲಿ ಅಲ್ಲಿನ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮಕೈಗೊಳ್ಳುತ್ತಿದ್ದು ಕೋವಿಡ್ ಸೋಂಕಿಗೆ ತುತ್ತಾಗಿರುವ ತಾಯಂದಿರು ಮತ್ತು ಮಕ್ಕಳನ್ನು ಪ್ರತ್ಯೇಕವಾಗಿರಿಸಿ ಹೆತ್ತವರಲ್ಲಿ ಆತಂಕ ಸೃಷ್ಟಿಗೂ ಕಾರಣವಾಗಿದೆ.

ತಮ್ಮ ಮಕ್ಕಳು ಎಲ್ಲಿ ಹೇಗಿದ್ದಾರೆ ಎಂದು ತಿಳಿಯದೆ ಹಲವು ಹೆತ್ತವರು ಕಂಗಾಲಾಗಿದ್ದು ಕೆಲವರಿಗೆ ಮಕ್ಕಳು ಚೆನ್ನಾಗಿದ್ದಾರೆಂಬ ಸಂಕ್ಷಿಪ್ತ ಸಂದೇಶವೊಂದು ಮಾತ್ರ ದೊರಕಿದೆ.
ಕೋವಿಡ್ ಸೋಂಕಿಗೊಳಗಾಗುವ ಮಕ್ಕಳನ್ನು ಹೆತ್ತವರಿಂದ ಪ್ರತ್ಯೇಕಿಸಿ ಪ್ರತ್ಯೇಕ ಕ್ವಾರಂಟೈನ್ ಕೇಂದ್ರಗಳಲ್ಲಿ ಇರಿಸಲಾಗುತ್ತಿದೆ.
ಚೀನಾದ ಸಾಮಾಜಿಕ ಜಾಲತಾಣ ವೇದಿಕೆಗಳಾದ ವೀಬೋ ಮತ್ತು ಡೋಯಿನ್ನಲ್ಲಿ ಮಕ್ಕಳು ಮಂಚದ ಮೇಲೆ ಕುಳಿತು ಅಳುತ್ತಿರುವುದು ಸಹ ಕಾಣಿಸುತ್ತಿದೆ. ವೀಡಿಯೋಗಳಲ್ಲಿ ಕೆಲ ಹಿರಿಯರೂ ಕಾಣಿಸುತ್ತಾರಾದರೂ ಮಕ್ಕಳ ಸಂಖ್ಯೆಯೇ ಅಧಿಕವಾಗಿದೆ.
ಕೋವಿಡ್ ಸೋಂಕಿಗೆ ಒಳಗಾದ ಮಕ್ಕಳನ್ನು ಜಿನ್ಶನ್ ಎಂಬಲ್ಲಿನ ಶಾಂಘಾಯಿ ಪಬ್ಲಿಕ್ ಹೆಲ್ತ್ ಕ್ಲಿನಿಕಲ್ ಸೆಂಟರ್ನಲ್ಲಿ ಇರಿಸಲಾಗುತ್ತಿದೆ ಎಂದು ಹೇಳಲಾಗಿದೆ. ಕೆಲವು ಪ್ರಕರಣಗಳಲ್ಲಿ ಮೂರು ತಿಂಗಳ ಶಿಶುಗಳನ್ನೂ ತಾಯಿಯಿಂದ ಪ್ರತ್ಯೇಕಿಸಿ ಇಡಲಾಗುತ್ತಿದೆ ಎಂದು ಹೇಳಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ಶಾಂಘಾಯಿ ಕಿಂಡರ್ಗಾರ್ಟನ್ನಿಂದ 20ಕ್ಕೂ ಅಧಿಕ 5ರಿಂದ 6 ವರ್ಷ ಪ್ರಾಯದ ಮಕ್ಕಳನ್ನು ಹೆತ್ತವರಿರಲ್ಲದೆಯೇ ಕ್ವಾರಂಟೈನ್ ಕೇಂದ್ರಕ್ಕೆ ರವಾನಿಸಲಾಗಿದೆ ಎಂದು ಒಂದು ವರದಿ ಹೇಳಿದೆ.