ಮೋಹನ್ ಲಾಲ್ ಅಭಿನಯದ ಜನಪ್ರಿಯ ಚಿತ್ರ'ಒಡಿಯನ್' ಹಿಂದಿಯಲ್ಲೂ ಡಬ್ ಆಗಲಿದೆ. ಚಿತ್ರ ಹಿಂದಿಗೆ ಅನುವಾದವಾಗುತ್ತಿದೆ. ವಿಎ ಶ್ರೀಕುಮಾರ್ ನಿರ್ದೇಶನದ ಹಿಂದಿ ಡಬ್ಬಿಂಗ್ ಆವೃತ್ತಿಯ ಟ್ರೇಲರ್ ಬಿಡುಗಡೆಯಾಗಿದೆ. ಚಿತ್ರದ ಹಿಂದಿ ಆವೃತ್ತಿಯ ಟ್ರೇಲರ್ ಅನ್ನು ಪೆನ್ ಮೂವೀಸ್ ಬಿಡುಗಡೆ ಮಾಡಿದೆ.
ಒಡಿಯನ್ 100 ಕೋಟಿ ಕ್ಲಬ್ ತಲುಪಿದ ಸಿನಿಮಾ. ಕೇರಳದಲ್ಲಿ ಬಿಡುಗಡೆಯಾದ ದಿನದಂದು ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರಗಳಲ್ಲಿ ಒಡಿಯನ್ ಎರಡನೇ ಸ್ಥಾನದಲ್ಲಿದೆ. ಚಿತ್ರವನ್ನು ಆಂಟೋನಿ ಪೆರುಂಬವೂರ್ ನಿರ್ಮಿಸಿದ್ದಾರೆ. ಮಂಜು ವಾರಿಯರ್ ನಾಯಕಿಯಾಗಿದ್ದರು. ಆಶೀರ್ವಾದ್ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಒಡಿಯನ್ ನಿರ್ಮಾಣವಾಗಿದೆ.