ಕೊಚ್ಚಿ: ಆಲಪ್ಪುಳ ಜಿಲ್ಲಾಧಿಕಾರಿ ಡಾ. ರೇಣುರಾಜ್ ಹಾಗೂ ರಾಜ್ಯ ಆರೋಗ್ಯ ಇಲಾಖೆ ಜಂಟಿ ಕಾರ್ಯದರ್ಶಿ ಹಾಗೂ ಕೇರಳ ವೈದ್ಯಕೀಯ ಸೇವಾ ನಿಗಮದ ಎಂಡಿ ಡಾ. ಶ್ರೀರಾಮ್ ವೆಂಕಟರಾಮನ್ ಇಂದು ವಿವಾಹಿತರಾದರು. ಚೋಟ್ಟಾಣಿಕ್ಕರ ಶ್ರೀಕ್ಷೇತ್ರದ ಸಭಾಂಗಣದಲ್ಲಿ ವಿವಾಹ ಸಮಾರಂಭ ನಡೆಯಿತು. ನಿಕಟ ಬಂಧು ಮಿತ್ರರು ಮಾತ್ರ ಭಾಗವಹಿಸಿದ್ದರು. ಶ್ರೀರಾಮ್ ವೆಂಕಟರಾಮನ್ ಮತ್ತು ರೇಣು ರಾಜ್ ಎಂಬಿಬಿಎಸ್ ಪದವಿ ಮುಗಿಸಿ ನಾಗರಿಕ ಸೇವೆಗೆ ಪ್ರವೇಶಿಸಿದವರಾಗಿದ್ದಾರೆ.
ಶ್ರೀರಾಮ್ ವೆಂಕಟರಾಮನ್ ಅವರು ವೈದ್ಯಕೀಯ ಸೇವಾ ನಿಗಮದ ಎಂಡಿ.ಯಾಗಿದ್ದಾರೆ. ರೇಣು ರಾಜ್ ಅಲಪ್ಪುಳದ ಜಿಲ್ಲಾಧಿಕಾರಿ. ಇದು ಶ್ರೀರಾಮ್ ಅವರ ಮೊದಲ ವಿವಾಹವಾದರೆ ರೇಣು ಅವರ ಎರಡನೇ ವಿವಾಹವಾಗಿದೆ. 2012ರಲ್ಲಿ ಸಿವಿಲ್ ಪರೀಕ್ಷೆಯಲ್ಲಿ ಶ್ರೀರಾಮ್ ದ್ವಿತೀಯ ಯಾರ್ಂಕ್ ಪಡೆದು ತೇರ್ಗಡೆಯಾಗಿದ್ದರು. 2014ರಲ್ಲಿ ರೇಣು ರಾಜ್ ಸಿವಿಲ್ ಸರ್ವೀಸ್ ಪರೀಕ್ಷೆಯಲ್ಲಿ ಪ್ರಥಮ ಯತ್ನದಲ್ಲಿ ಎರಡನೇ ಯಾರ್ಂಕ್ ಪಡೆದು ತೇರ್ಗಡೆಯಾಗಿದ್ದರು.
ರೇಣು ರಾಜ್ ಕೊಟ್ಟಾಯಂ ಮೂಲದವರು. ತ್ರಿಶೂರ್ ಸಬ್ ಕಲೆಕ್ಟರ್ ಆಗಿ ಮೊದಲ ನೇಮಕಾತಿಯಾಗಿತ್ತು. ದೇವಿಕುಳಂ ಸಬ್ ಕಲೆಕ್ಟರ್ ಆಗಿ ಮೊದಲು ಶ್ರೀರಾಮ್ ಮತ್ತು ನಂತರ ರೇಣು ಅಕ್ರಮ ಒತ್ತುವರಿ ಮತ್ತು ಕೇರಳದ ಎನ್‍ಕೌಂಟರ್ ವಿರುದ್ಧ ತೆಗೆದುಕೊಂಡ ಕ್ರಮಗಳ ಬಗ್ಗೆ ಭಾರೀ ಚರ್ಚೆಗಳಾಗಿದ್ದವು. ಪತ್ರಕರ್ತನ ಹತ್ಯೆ ಆರೋಪದ ಹಿನ್ನೆಲೆಯಲ್ಲಿ ಈ ಹಿಂದೆ ಶ್ರೀರಾಮ್ ವೆಂಕಟರಾಮನ್ ಅವರನ್ನು ಅಮಾನತುಗೊಳಿಸಲಾಗಿತ್ತು. ಬಳಿಕ ನಾಗರಿಕ ಸೇವೆಗೆ ಮರು ನಿಯುಕ್ತಿ ಮಾಡಲಾಗಿತ್ತು.