ಕೊಟ್ಟಾಯಂ: 12 ವರ್ಷದ ಬಾಲಕನೊಬ್ಬ ತನ್ನ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿ ಆತ್ಮಹತ್ಯೆಗ್ಯೆದ ಹೇಯ ಘಟನೆ ನಡೆದಿದೆ. ಮಾಧವನ್ ಪಂಪಾಡಿ ಕುನಾನೆಪ್ಪಲಂ ಅರೈಕ್ಕಾಪರಂಬಿಲ್ ನ ಮಾಧವ ಎಂಬವ ಆತ್ಮಹತ್ಯೆಗ್ಯೆದ ಬಾಲಕ. ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಬಾಲಕ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಯಲ್ಲಿ ಕೊನೆಯುಸಿರೆಳೆದ.
ಸುಮಾರು 80 ಪ್ರತಿಶತದಷ್ಟು ಸುಟ್ಟ ಗಾಯಗಳಾದ ಬಾಲಕನನ್ನು ಕೊಟ್ಟಾಯಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಜೀವವನ್ನು ಉಳಿಸಲು ಸಾಧ್ಯವಾಗಲಿಲ್ಲ. ಕೌಟುಂಬಿಕ ಸಮಸ್ಯೆಗಳಿಂದ ಮಗು ಮನನೊಂದಿತ್ತು ಎಂದು ಸ್ಥಳೀಯರು ಹೇಳುತ್ತಾರೆ. ಮನೆಯವರೊಂದಿಗೆ ಜಗಳವಾಡಿ ಮಾಧವ್ ಬೆಂಕಿ ಹಚ್ಚಿಕೊಂಡಿದ್ದ.