ತಿರುವನಂತಪುರ: ನ್ಯಾಯಕ್ಕಾಗಿ ಆಗ್ರಹಿಸಿ ಕೆಎಸ್‌ಆರ್‌ಟಿಸಿ ಎಂಪನೆಲ್ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಮುಂದುವರಿದಿದೆ. ಉದ್ಯೋಗ ವಿನಿಮಯ ಕೇಂದ್ರದ(ಎಂಪ್ಲೋಯ್ ಮೆಂಟ್ ಸೆಂಟರ್) ಮೂಲಕ ಕೆಲಸ ಪಡೆದ ನೂರಾರು ನೌಕರರು ಸರಕಾರದ ನಿರ್ಲಕ್ಷ್ಯದಿಂದ ರಸ್ತೆಗಿಳಿದಿದ್ದಾರೆ. ಮುಖ್ಯಮಂತ್ರಿ ಹಾಗೂ ಇಲಾಖಾ ಸಚಿವರ ನಿರ್ಲಕ್ಷ್ಯದಿಂದ ಅತಂತ್ರರಾಗಿದ್ದಾರೆ.
ಕೊರೋನಾ ಅವಧಿಯಲ್ಲಿ, ಕೆಎಸ್‌ಆರ್‌ಟಿಸಿ ಉದ್ಯೋಗ ವಿನಿಮಯ ಕೇಂದ್ರದ ಮೂಲಕ ಕೆಲಸಕ್ಕೆ ತೆರಳಿದ್ದ 8000 ಕ್ಕೂ ಹೆಚ್ಚು ತಾತ್ಕಾಲಿಕ ನೌಕರರನ್ನು ವಜಾಗೊಳಿಸಿದೆ. ಮಾರ್ಚ್ 23, 2022 ರಂದು ಎರಡು ವರ್ಷಗಳನ್ನು ಪೂರೈಸಿದ ನಂತರ ಕೆಲಸ ಕಳೆದುಕೊಂಡವರು ಮುಷ್ಕರಕ್ಕಿಳಿದಿದ್ದಾರೆ. 10 ಮತ್ತು 15 ವರ್ಷಗಳಿಂದ ಕೆಎಸ್‌ಆರ್‌ಟಿಯಲ್ಲಿ ದುಡಿದ ಕಾರ್ಮಿಕರನ್ನು ರಕ್ಷಿಸುವ ಹೊಣೆಗಾರಿಕೆ ಸರ್ಕಾರದ ಮೇಲಿದ್ದು, ಇಲ್ಲದೇ ಹೋದಲ್ಲಿ ಮುಷ್ಕರದ ಗತಿ ಬದಲಾಗಲಿದೆ ಎಂದು ಪ್ರತಿಭಟನಾಕಾರರು ಹೇಳಿದರು.
ಸಮಸ್ಯೆ ಬಗೆಹರಿಸುವಂತೆ ಸಚಿವ ಆ್ಯಂಟನಿ ರಾಜು ಅವರ ಬಳಿ ಮಾತುಕತೆ ನಡೆಸಿದರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಪ್ರತಿಭಟನಾಕಾರರು.