HEALTH TIPS

ರಾಜ್ಯದಲ್ಲಿ ಹೊಸ ಮದ್ಯ ನೀತಿ ಜಾರಿ: ಇನ್ನಷ್ಟು ಬಾರ್‍ಗಳು ತೆರೆಯಲು ಸರ್ಕಾರದ ಅನುಮತಿ

                 ತಿರುವನಂತಪುರಂ: ರಾಜ್ಯದ ನೂತನ ಮದ್ಯ ನೀತಿ ನಿನ್ನೆಯಿಂದ(ಏ.1 ) ಜಾರಿಗೆ ಬಂದಿದೆ. ಅದರಂತೆ ಇನ್ನಷ್ಟು ಬಾರ್‍ಗಳನ್ನು ಆರಂಭಿಸಲಾಗುವುದು. ಅಬಕಾರಿ ಸುಂಕ ಹೆಚ್ಚಳದಿಂದ ಮಿಲಿಟರಿ ಪ್ಯಾರಾಮಿಲಿಟರಿ ಕ್ಯಾಂಟೀನ್‍ಗಳಿಂದ ಮದ್ಯದ ಬೆಲೆ ಹೆಚ್ಚಾಗುತ್ತದೆ. ಬಾರ್‍ಗಳಲ್ಲಿನ ವಿವಿಧ ಶುಲ್ಕಗಳ ಹೆಚ್ಚಳ ನಿನ್ನೆಯಿಂದಲೇ ಜಾರಿಗೆ ಬಂದಿದೆ.  ಸೇವಾ ಶುಲ್ಕ ಮತ್ತು ಹೆಚ್ಚುವರಿ ಬಾರ್ ಕೌಂಟರ್‍ಗಳ ಶುಲ್ಕವನ್ನು ಹೆಚ್ಚಿಸಲಾಗಿದೆ.

             ಎಫ್‍ಎಲ್1 ಅಂಗಡಿಗಳಲ್ಲಿ ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ಹೆಚ್ಚಿನ ಬಾರ್‍ಗಳನ್ನು ಸ್ಥಾಪಿಸಲಾಗುವುದು. ಜನರು ಜನನಿಬಿಡ ಪ್ರದೇಶಗಳಿಂದ ಹೊರಹೋಗದಂತೆ ಬೆವ್ಕೊ ಮತ್ತು ಕನ್ಸ್ಯೂಮರ್ ಫೆಡ್ ಅಡಿಯಲ್ಲಿ ವಿದೇಶಿ ಮದ್ಯದ ಚಿಲ್ಲರೆ ಮಾರಾಟ ಮಳಿಗೆಗಳನ್ನು ಪುನಃ ತೆರೆಯುವ ಪ್ರಸ್ತಾಪವಿದೆ.

                ಪರಿಷ್ಕøತ ಮದ್ಯ ನೀತಿಯು ಹೆಚ್ಚಿನ ಬೆಪ್ಕೋ ಅಂಗಡಿಗಳನ್ನು ವಾಕ್-ಇನ್ ಸೌಲಭ್ಯದೊಂದಿಗೆ ನವೀಕರಿಸಲು ಪ್ರಸ್ತಾಪಿಸುತ್ತದೆ. ಬಿವರೇಜ್  ಅಂಗಡಿಗಳಲ್ಲಿ ದಟ್ಟಣೆಯನ್ನು ತಪ್ಪಿಸಲು, ಕಾರ್ಯನಿರ್ವಹಿಸುತ್ತಿದ್ದ ಆದರೆ ಮುಚ್ಚಿರುವ ಅಂಗಡಿಗಳನ್ನು ಪ್ರೀಮಿಯಂ ಅಂಗಡಿಗಳಾಗಿ ಪುನಃ ತೆರೆಯಲಾಗುತ್ತದೆ. ಬಿವರೇಜಸ್ ಕಾಪೆರ್Çರೇಷನ್ ಹೆಚ್ಚುವರಿಯಾಗಿ 170 ಮಳಿಗೆಗಳಿಗೆ ಬೇಡಿಕೆ ಇಟ್ಟಿತ್ತು. ಸ್ಥಳಕ್ಕನುಗುಣವಾಗಿ ಆಧುನಿಕ ಸೌಲಭ್ಯಗಳೊಂದಿಗೆ ಹೊಸ ಮಳಿಗೆಗಳನ್ನು ತೆರೆಯಲಾಗುವುದು.

                   ಅಸ್ತಿತ್ವದಲ್ಲಿರುವ ಸಂಸ್ಥೆಗಳಲ್ಲಿ ಉತ್ಪಾದನೆಯನ್ನು ಹೆಚ್ಚಿಸಲಾಗುವುದು ಮತ್ತು ಕೇರಳಕ್ಕೆ ಅಗತ್ಯವಿರುವ ಭಾರತೀಯ ನಿರ್ಮಿತ ವಿದೇಶಿ ಮದ್ಯ ಮತ್ತು ಬಿಯರ್ ಉತ್ಪಾದಿಸಲು ಹೊಸ ಘಟಕಗಳನ್ನು ಪ್ರಾರಂಭಿಸಲಾಗುವುದು. ಹೊಸ ಮದ್ಯದ ನೀತಿಯ ಪ್ರಕಾರ, ಐಟಿ ಪಾರ್ಕ್‍ಗಳಲ್ಲಿ ಬಿಯರ್ ಮತ್ತು ವೈನ್ ಪಾರ್ಲರ್‍ಗಳಿಗೆ ಪರವಾನಗಿ ನೀಡಲಾಗುವುದು. ಸಾರಾಯಿ ಪರವಾನಗಿಯನ್ನೂ ನೀಡಲಾಗುವುದು. 3 ಸ್ಟಾರ್ ಮತ್ತು ಅದಕ್ಕಿಂತ ಹೆಚ್ಚಿನ ರೇಟಿಂಗ್ ಹೊಂದಿರುವ ಹೋಟೆಲ್‍ಗಳಿಗೆ ಮಾತ್ರ ಬಾರ್ ಪರವಾನಗಿಗಳನ್ನು ನೀಡಲಾಗುತ್ತದೆ.

                    ಹಣ್ಣುಗಳಿಂದ ಕಡಿಮೆ ಆಲ್ಕೋಹಾಲ್ ಮದ್ಯವನ್ನು ಉತ್ಪಾದಿಸಲು ನಿರ್ಧರಿಸಿದೆ. ಗೇರು, ಅನಾನಸ್, ಹಲಸು, ಬಾಳೆಹಣ್ಣು ಮತ್ತು ಕ್ಯಾಸ್ಟರ್ ಆಯಿಲ್‍ನಿಂದ ಸೌಮ್ಯವಾದ ಆಲ್ಕೋಹಾಲ್ ಮತ್ತು ವೈನ್ ಉತ್ಪಾದಿಸಲು ಅನುಮತಿ ನೀಡಲಾಗಿದೆ.

                   ಇದೇ ವೇಳೆ ಸರ್ಕಾರದ ಮದ್ಯ ನೀತಿಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಮದ್ಯ ನೀತಿಯನ್ನು ಮರುಪರಿಶೀಲಿಸಬೇಕು ಎಂದು ಎಐಟಿಯುಸಿ, ಸಿಪಿಐನ ಕಾರ್ಮಿಕ ಸಂಘಟನೆ ಒತ್ತಾಯಿಸಿದೆ. ಕಳ್ಳಿನ ಗಿರಣಿಗಳನ್ನು ಸಂರಕ್ಷಿಸಬೇಕು ಹಾಗೂ ಮುಚ್ಚಿರುವ ಕಳ್ಳಿನ ಅಂಗಡಿಗಳನ್ನು ತೆರೆಯಬೇಕು ಎಂದು ಎಐಟಿಯುಸಿ ಒತ್ತಾಯಿಸಿದೆ. ಪ್ರತಿಪಕ್ಷದ ನಾಯಕ ವಿ.ಡಿ.ಸತೀಶನ್ ಅವರು ಹೊಸ ಬಾರ್ ಗಳ ಆರಂಭದಲ್ಲೇ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries