ಕಾಸರಗೋಡು: ಕೈಗಾರಿಕಾ ಇಲಾಖೆ ಸಮಾರಂಭದಲ್ಲಿ ಉದ್ಘಾಟಕರಾಗಿ ಆಗಮಿಸಿದ್ದ ಮುಖ್ಯಮಂತ್ರಿಯನ್ನು ವಿವರಿಸಿದ ಉದ್ಘೋಷಕರ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ‘ಶುದ್ಧ ಭಕ್ತಿಯಿಂದ ತುಂಬಿದವರು’ ಎಂದು ಉದ್ಘೋಷಕರು ಬಣ್ಣಿಸಿದರು. ಕೆಇಎಲ್-ಇಎಂಎಲ್ ಉದ್ಘಾಟನೆಗೆ ಮುಖ್ಯಮಂತ್ರಿಯನ್ನು ಆಹ್ವಾನಿಸಿದಾಗ ಈ ಉಲ್ಲೇಖ ಮಾಡಲಾಗಿತ್ತು.
ಎಡಪಕ್ಷಗಳ ಘೋಷಿತ ನಿಲುವಿಗೆ ವ್ಯತಿರಿಕ್ತವಾಗಿ ಮುಖ್ಯಮಂತ್ರಿಯನ್ನು ಬಣ್ಣಿಸಲಾಗಿದೆ ಎಂಬ ಟೀಕೆಗಳು ಹೆಚ್ಚುತ್ತಿವೆ. ‘ಶುದ್ಧ ಭಕ್ತಿಯ ಪೂರ್ಣತೆ ಮಾತ್ರ ಅಂತಃಪುರಕ್ಕೆ ಜ್ಞಾನೋದಯವನ್ನು ತರುತ್ತದೆ ಎಂಬ ಸಂದೇಶವನ್ನು ಸಾರುವ ಮೂಲಕ ಮುಖ್ಯಮಂತ್ರಿ ಸೇರಿದಂತೆ ಗಣ್ಯ ವ್ಯಕ್ತಿಗಳು ದೀಪ ಬೆಳಗಿಸುತ್ತಾರೆ’ ಎಂದು ಉದ್ಘೋಷಕರು ಹೇಳಿದ್ದರು.
ಸರ್ಕಾರದ ಅಧಿಕೃತ ಕಾರ್ಯಕ್ರಮದಲ್ಲಿ ಈ ರೀತಿಯ ಉಲ್ಲೇಖಗಳು ಅನುಚಿತವಾಗಿವೆ ಎಂಬ ಟೀಕೆಗಳು ವ್ಯಕ್ತವಾಗಿವೆ. ಇದೇ ವೇಳೆ, ಎಲ್ಡಿಎಫ್ ಸರ್ಕಾರದ ನಿಲುವಿನ ವಿರುದ್ದದ ಇಂತಹ ಟೀಕೆಗಳಿಗೆ ಮುಖ್ಯಮಂತ್ರಿ ಪ್ರತಿಕ್ರಿಯಿಸಲಿಲ್ಲ. ಉದ್ಘೋಷಕರ ತಿಳುವಳಿಕೆಯ ಕೊರತೆ ಇಂತಹ ಹೇಳಿಕೆಯ ನಿಜವಾದ ಕಾರಣ ಎಂದು ಮುಖ್ಯಮಂತ್ರಿಗಳ ಪರವಾದ ತಂಡವೊಂದು ಸಮಜಾಯಿಷಿ ನೀಡಿದೆ.