ಬದಿಯಡ್ಕ: ಕುಂಬ್ಡಾಜೆ ಮುನಿಯೂರು ಶ್ರೀ ಗೋಪಾಲಕೃಷ್ಣ ದೇವಾಲಯದಲ್ಲಿ ಬಾಲಾಲಯ ಪ್ರತಿಷ್ಠೆ ಭಾನುವಾರ ಜರುಗಿತು. ಆಚಾರ್ಯವರ್ಯ ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿ ಅವರ ನೇತೃತ್ವದಲ್ಲಿ ತಾಂತ್ರಿಕ ವಿಧಿವಿಧಾನಗಳು ಜರುಗಿದುವು. ಈ ಸಂಬಂಧ ಜರುಗಿದ ಧಾರ್ಮಿಕ ಸಭೆಯಲ್ಲಿ ಉದ್ಯಮಿ, ಧಾರ್ಮಿಕ ಮುಂದಾಳು ವಸಂತ ಪೈ ಬದಿಯಡ್ಕ ಧಾರ್ಮಿಕ ಭಾಷಣ ಮಾಡಿದರು. ಅವರು ನವೀಕರಣ ಸಂಬಂಧ ವಿಜ್ಞಾಪನೆ ಪತ್ರವನ್ನೂ ಈ ಸಂದರ್ಭ ಬಿಡುಗಡೆಗೊಳಿಸಿ, ಆನುವಂಶಿಕ ಮೊಕ್ತೇಸರ ಗೋಪಾಲಕೃಷ್ಣ ನಡುವಂತಿಲ್ಲಾಯ ಅವರಿಗೆ ಹಸ್ತಾಂತರಿಸಿದರು.
ಸೇವಾ ಸಮಿತಿ ಅಧ್ಯಕ್ಷ ಅಜ್ಜಿಮೂಲೆ ಕೃಷ್ಣ ಭಟ್, ನಾರಂಪಾಡಿ ಶ್ರೀ ಉಮಾಮಹೇಶ್ವರ ದೇವಾಲಯ ಆಡಳಿತ ಸಮಿತಿ ಅಧ್ಯಕ್ಷ ಟಿ. ಸುಬ್ರಹ್ಮಣ್ಯ ಭಟ್, ಖ್ಯಾತ ವೈದ್ಯ, ಕವಿ ಡಾ.ರಮಾನಂದ ಬನಾರಿ, ಕುಂಬ್ಡಾಜೆ ಗ್ರಾಮ ಪಂಚಾಯತಿ ಸದಸ್ಯ ಹರೀಶ್ ಗೋಸಾಡ ಉಪಸ್ಥಿತರಿದ್ದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎಸ್.ಎನ್.ಮಯ್ಯ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಅರವಿಂದ ಕುಮಾರ್ ಅಲೆವೂರಾಯ ನೇರಪ್ಪಾಡಿ ಸ್ವಾಗತಿಸಿ, ಡಿ.ಕೆ.ನಾರಾಯಣನ್ ನಾಯರ್ ವಂದಿಸಿದರು. ಪತ್ರಕರ್ತ ವೀಜಿ. ಕಾಸರಗೋಡು ಕಾರ್ಯಕ್ರಮ ನಿರೂಪಿಸಿದರು.