ಕುಂಬಳೆ: ಕುಂಬಳೆ ಗ್ರಾಮ ಪಂಚಾಯತಿಯಲ್ಲಿ ವಾರ್ಷಿಕ ಯೋಜನೆಯಡಿ ವಿವಿಧ ವಾರ್ಡ್ ಗಳಲ್ಲಿ ಮಿನಿಮಾಸ್ಟ್ ದೀಪಗಳನ್ನು ಅಳವಡಿಸಲಾಗಿದೆ. ಗ್ರಾಮ ಪಂಚಾಯತಿ ಅಧ್ಯಕ್ಷೆ ಯು.ಪಿ.ತಾಹಿರಾ ಯೂಸುಫ್ ನೂತನ ಬೆಳಕು ಯೋಜನೆಗೆ ಚಾಲನೆ ನೀಡಿದರು. ಆರಿಕ್ಕಾಡಿ ಆರೋಗ್ಯ ಕೇಂದ್ರ, ಬಂಬ್ರಾಣ, ಅಂಡಿತಡ್ಕ, ಬಾಯಿಕಟ್ಟೆ ತಾಹಾ ಮಸೀದಿ ಮತ್ತು ಚೆಕ್‍ಪೋಸ್ಟ್ ಮಾಂ ಕಾಳಿಪಳ್ಳ ಬಳಿ ಮಿನಿಮಾಸ್ಟ್ ದೀಪಗಳನ್ನು ಅಳವಡಿಸಲಾಗಿದೆ. ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷೆ ಪಿ.ನಸೀಮಾ, ಸದಸ್ಯರಾದ ಯೂಸುಫ್ ಉಳುವಾರ್, ರವಿರಾಜ್ ಹಾಗೂ ಸಾಮಾಜಿಕ ಕಾರ್ಯಕರ್ತರು ಉಪಸ್ಥಿತರಿದ್ದರು.