ಕಾಸರಗೋಡು: 2022-23ನೇ ಸಾಲಿನ ಉದ್ಯಮಶೀಲತಾ ವರ್ಷಾಚರಣೆ ಹಾಗೂ ಸರ್ಕಾರದ ಪ್ರಥಮ ವಾರ್ಷಿಕೋತ್ಸವದ ಅಂಗವಾಗಿ ಜಿಲ್ಲಾ ಕೈಗಾರಿಕಾ ಕೇಂದ್ರವು ಸಿದ್ಧಪಡಿಸಿರುವ ಇಲಾಖೆಯ ನಾನಾ ಯೋಜನೆಗಳು ಹಾಗೂ ಚಟುವಟಿಕೆಗಳನ್ನು ಒಳಗೊಂಡ ಕಿರುಪುಸ್ತಕವನ್ನು ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರಚಂದ್ ಜಿಲ್ಲಾ ಮಾಹಿತಿ ಅಧಿಕಾರಿ ಎಂ ಮಧುಸೂದನನ್ ಅವರಿಗೆ ಹಸ್ತಾಂತರಿಸಿ ಬಿಡುಗಡೆಗೊಳಿಸಿದರು. ಜಿಲ್ಲಾ ಕೈಗಾರಿಕಾ ಅಧಿಕಾರಿ ಕೆ.ಪಿ.ಗಿರೀಶ್ ಕುಮಾರ್ ಉಪಸ್ಥಿತರಿದ್ದರು.
ಕೈಪಿಡಿಯಲ್ಲಿ ಉದ್ಯಮಶೀಲತಾ ಯೋಜನೆಯ ಮಾಹಿತಿ, ಸಣ್ಣ ಘಟಕಗಳಿಗೆ ನೆರವು, ಕೈಗಾರಿಕಾ ಭದ್ರತೆ, ಕೋವಿಡ್ ಪರಿಹಾರ ಯೋಜನೆ, ಕೈಮಗ್ಗ ಕ್ಷೇತ್ರದ ವಿವಿಧ ಯೋಜನೆಗಳು, ಪ್ರಧಾನಮಂತ್ರಿ ಉದ್ಯೋಗ ಯೋಜನೆ, ಕೈಗಾರಿಕೆ ಇಲಾಖೆಯಿಂದ ಒದಗಿಸಲಾಗುವ ವಿವಿಧ ಸೇವೆಗಳು ಮತ್ತು ಉದ್ಯಮ ಸ್ನೇಹಿ ವಾತಾವರಣವನ್ನು ಸೃಷ್ಟಿಸುವ ಚಟುವಟಿಕೆಗಳನ್ನು ಒಳಗೊಂಡಿದೆ. ರಾಜ್ಯ ಸರ್ಕಾರದ ಪ್ರಥಮ ವಾರ್ಷಿಕೋತ್ಸವದ ನಿಮಿತ್ತ ಕಾಞಂಗಾಡ್ ನ ಅಲಾಮಿಪಳ್ಳಿಯಲ್ಲಿ ಮೇ 9ರಿಂದ 19ರವರೆಗೆ ನಡೆಯಲಿರುವ ಮೈ ಕೇರಳ ವಸ್ತುಪ್ರದರ್ಶನ ಮತ್ತು ಮಾರುಕಟ್ಟೆ ಮೇಳದಲ್ಲಿ ಸಾರ್ವಜನಿಕರಿಗೆ ಈ ಕೈಪಿಡಿ ಉಚಿತವಾಗಿ ಲಭ್ಯವಾಗಲಿದೆ.