ಕಾಸರಗೋಡು: ಕುಂಬಳೆ ಕೊಯಿಪ್ಪಾಡಿ ನಿವಾಸಿ, ಬಿಎಂಎಸ್ ಕಾರ್ಯಕರ್ತ ವಿನು ಅವರ ಕೊಲೆ ಪ್ರಕರಣದ ಮೂವರು ಆರೋಪಿಗಳು ನ್ಯಾಯಾಲಯಕ್ಕೆ ಶರಣಾಗಿದ್ದಾರೆ. ಸಿಪಿಎಂ ಸ್ಥಳೀಯ ಸಮಿತಿ ಸದಸ್ಯ, ಕುಂಬಳೆ ಗ್ರಾಪಂ ಮಾಜಿ ಸದಸ್ಯ ಎಸ್.ಕೊಗ್ಗು, ಸಿಪಿಎಂ ಸದಸ್ಯ ಶಾಂತಿಪಳ್ಳ ನಿವಾಸಿ ಬಾಲನ್, ಲಕ್ಷಂವೀಡ್ ಕಾಲನಿ ನಿವಾಸಿ ಮಹಮ್ಮದ್‍ಕುಞÂ ನ್ಯಾಯಾಲಯಕ್ಕೆ ಶರಣಾದವರು.ಬಂಧಿತರನ್ನು ಕಣ್ಣೂರಿನ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿದೆ. ಪ್ರಕರಣದ ಇನ್ನೊಬ್ಬ ಆರೋಪಿ ಬಾಳಕೃಷ್ಣ ಈ ಹಿಂದೆ ನಿಧನರಾಗಿದ್ದಾರೆ.
1998 ಅ. 9ರಂದು ಬಿಎಂಎಸ್ ಕಾರ್ಯಕರ್ತ ವಿನು ಕೊಯಿಪ್ಪಾಡಿ ಅವರನ್ನು ತಾನು ಕೆಲಸ ಮಾಡುತ್ತಿದ್ದ ಪ್ಲೈವುಡ್ ಕಾರ್ಖಾನೆಯಲ್ಲಿ ಇರಿದು ಕೊಲೆಗೈಯಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಕೊಗ್ಗು ಸೇರಿದಂತೆ ಎಲ್ಲ ಆರೋಪಿಗಳಿಗೆ ಜಿಲ್ಲಾ ಸೆಶನ್ಸ್ ನ್ಯಾಯಾಲಯ ಏಳು ವರ್ಷಗಳ ಶಿಕ್ಷೆ ವಿಧಿಸಿತ್ತು. ಈ ತೀರ್ಪಿಗೆ 2021 ಡಿಸೆಂಬರ್‍ನಲ್ಲಿ ಹೈಕೋಟು ತಡೆಯಾಜ್ಞೆ ನೀಡಿದ್ದು, ಏಳು ವರ್ಷಗಳ ಶಿಕ್ಷೆಯನ್ನು ನಾಲ್ಕು ವರ್ಷಕ್ಕೆ ಕಡಿತಗೊಳಿಸಿತ್ತು. ಇದರ ವಿರುದ್ದಮೇಲ್ಮನವಿ ಸಲ್ಲಿಸಿದ್ದು, ನಾಲ್ಕು ತಿಂಗಳ ಒಳಗಾಗಿ ನ್ಯಾಯಾಲಯಕ್ಕೆ ಶರಣಾಗುವಂತೆ ಸೂಚಿಸಲಾಗಿತ್ತು.