ಕಾಸರಗೋಡು: ವಿಶ್ವ ಕರ್ತಾ ಕುಟುಂಬದ (ಡಬ್ಲ್ಯುಕೆಎಫ್) ಮಹಾಸಭೆ ಆಲುವಾ ಮಹಾನಮಿ ಹೊಟೇಲ್‍ನಲ್ಲಿ ನಡೆಯಿತು. ಡಬ್ಲ್ಯುಕೆಎಫ್ ಸಂಘದ ಅಧ್ಯಕ್ಷರಾಗಿ ಸಿ.ಎಸ್.ಕರ್ತಾ, ಪ್ರಧಾನ ಕಾರ್ಯದರ್ಶಿಯಾಗಿ ಡಾ.ದಿನೇಶ್ ಕರ್ತಾ ಮತ್ತು ಕೋಶಾಧಿಕಾರಿಯಾಗಿ ಕೆ.ರಮೇಶ್ ಕರ್ತಾ ಅವರನ್ನು ಆಯ್ಕೆ ಮಾಡಲಾಯಿತು. ಟಿ.ನಂದಕುಮಾರ್ ಕರ್ತಾ ಮತ್ತು ಮೋಹನಕುಮಾರ್.ಜಿ ಪೆÇೀಷಕರಾಗಿ ಆಯ್ಕೆ ಮಾಡಲಾಯಿತು. ಹಿಂದುಳಿದ ವರ್ಗಗಳ ಆರ್ಥಿಕ ಮೀಸಲಾತಿಯಲ್ಲಿನ ಲೋಪಗಳನ್ನು ಸರಿಪಡಿಸಬೇಕು ಸಮುದಾಯಕ್ಕೆ ಸಿಗುವ ಸವಲತ್ತುಗಳನ್ನು ಕಾಲಕಾಲಕ್ಕೆ ಹೆಚ್ಚಿಸಬೇಕು ಎಂದು ಸಭೆ ಆಗ್ರಹಿಸಿತು.