ಕೋಝಿಕ್ಕೋಡ್: ಕೊಡಂಚೇರಿಯಲ್ಲಿ ಮಿಶ್ರ ವಿವಾಹಕ್ಕೆ ಜೋಯ್ಸ್ ಳ ತಂದೆ ಪ್ರತಿಕ್ರಿಯಿಸಿದಗದಾರೆ. ರಾಜ್ಯ ಪೊಲೀಸರ ಮೇಲೆ ನನಗೆ ನಂಬಿಕೆ ಇಲ್ಲ ಮತ್ತು ಘಟನೆಯನ್ನು ಕೇಂದ್ರ ಸಂಸ್ಥೆಗಳಿಂದ ತನಿಖೆ ನಡೆಸಬೇಕು ಎಂದು ತಂದೆ ಹೇಳಿದರು. ಕುಟುಂಬ ಹೈಕೋರ್ಟ್‌ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದೆ ಎಂದು ತಂದೆ ತಿಳಿಸಿದ್ದಾರೆ.
ಪೊಲೀಸರ ಮೇಲೆ ನಂಬಿಕೆ ಇಲ್ಲ. ಘಟನೆಯನ್ನು ಸಿಬಿಐ ಅಥವಾ ಎನ್‌ಐಎ ತನಿಖೆ ನಡೆಸಬೇಕು. ತನ್ನ ಮಗಳು ಮೋಸ ಹೋಗಿದ್ದಾಳೆ ಎಂದು ತಂದೆ ಹೇಳಿದ್ದಾರೆ. ಮಗಳನ್ನು ಅಪಹರಿಸಲಾಗಿದೆ ಎಂದು ಆರೋಪಿಸಿ ಜೋಯಿಸ್ ತಂದೆ ಪೊಲೀಸರಿಗೆ ದೂರು ನೀಡಿದ್ದರು. ಆದರೆ, ತನ್ನನ್ನು ಯಾರೂ ಕಿಡ್ನಾಪ್ ಮಾಡಿಲ್ಲ, ಸ್ವ ಇಚ್ಚಿಯಿಂದಲೇ ಮದುವೆ ಮಾಡಿಕೊಂಡಿದ್ದೇನೆ ಎಂದು ಜೋಯಿಸ್ ಹೇಳಿಕೆ ನೀಡಿದ್ದಾಳೆ.