ಕುಂಬಳೆ : ಬಹಳ ವೇಗವಾಗಿ ಅಭಿವೃಧ್ದಿ ಹೊಂದುತ್ತಿರುವ ಸೀತಾಂಗೋಳಿ ಪೇಟೆಯನ್ನು ಪ್ಲಾಸ್ಟಿಕ್ ಮಾಲಿನ್ಯ ಮುಕ್ತಗೊಳಿಸುವ ಯೋಜನೆಯೊಂದಕ್ಕೆ ಬೇಳ ಸೈಂಟ್ ಮೇರೀಸ್ ಕಾಲೇಜಿನ ಯನ್.ಯಸ್.ಯಸ್ ಘಟಕ, ಶೋಕ ಮಾತಾ ಧರ್ಮ ಕೇಂದ್ರದ ಐ.ಸಿ.ವೈ.ಮ್ ಹಾಗೂ ಕೆಥೋಲಿಕ್ ಸಭಾ ಘಟಕ ಜಂಟಿಯಾಗಿ ಚಾಲನೆ ನೀಡಿದೆ.
ಈ ಬಗ್ಗೆ ನಡೆದ ಪೇಟೆ ಶುಚಿತ್ವ ಹಾಗೂ ಸಭಾ ಕಾರ್ಯಕ್ರಮವನ್ನು ಪುತ್ತಿಗೆ ಗ್ರಾಮ ಪಂಚಾಯತಿ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಪಾಲಾಕ್ಷ ರೈ ಪಿ.ಉಧ್ಘಾಟಿಸಿದರು. ಬೇಳ ಶೋಕ ಮಾತಾ ಧರ್ಮಕೇಂದ್ರದ ವಂದನೀಯ ಸ್ಟ್ಯಾನಿ ಪಿರೇರ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಎನ್.ಎಸ್.ಎಸ್, ಕೆಥೋಲಿಕ್ ಸಭಾ ಬೇಳ ಘಟಕ, ಭಾರತೀಯ ಕೆಥೋಲಿಕ್ ಯುವ ಸಂಚಾಲನ ಮತ್ತು ಸಿ.ಒ.ಡಿ.ಪಿ ಸದಸ್ಯರು ಸಹಕರಿಸಿದರು. ಶುಚೀಕರಣದ ಭಾಗವಾಗಿ ಸ್ವಯಂ ಸೇವಕರು ಸುಮಾರು ಎಪ್ಪ್ತೈದು ಗೋಣಿಗಳಷ್ಟು ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸಂಗ್ರಹಿಸಿ ಪುತ್ತಿಗೆ ಪಂಚಾಯತಿನ ತ್ಯಾಜ್ಯ ಸಂಗ್ರಹ ಘಟಕಕ್ಕೆ ಹಸ್ತಾಂತರಿಸಿದರು.ಪ್ರಮುಖವಾಗಿ ಪುತ್ತಿಗೆ ಭಾಗಕ್ಕೆ ತೆರಳುವ ಭಾಗದಲ್ಲಿ ಶುಚಿತ್ವಕ್ಕೆ ಪ್ರಾಮುಖ್ಯತೆ ನೀಡಿಲಾಯಿತು.
ವಾರ್ಡ್ ಸದಸ್ಯೆ ಕಾವ್ಯಶ್ರೀ, ಬ್ರದರ್ ಡೆನ್ಜಿಲ್, ಜೊಸ್ಸಿ ಕ್ರಾಸ್ತ, ಪೀಟರ್ ಪೌಲ್, ಶ್ರೀಜ, ಅಬ್ದಲ್ ಆಶಿಕ್, ಅನೂಪ್.ಕೆ, ರಾಜು ಕಿದೂರು ಮೊದಲಾದವರು ಉಪಸ್ಥಿತರಿದ್ದರು. ಕಾಲೇಜು ಪ್ರಾಂಶುಪಾಲ ಅನಿಲ್ ಅವಿಲ್ಡ್ ಲೋಬೊ ಸ್ವಾಗತಿಸಿ, ಐ.ಸಿ.ವೈ.ಯಮ್. ಅಧ್ಯಕ್ಷ ಸಂತೋಷ್ ಡಿ'ಸೋಜ ವಂದಿಸಿದರು. ಕೃಷ್ಣ ಕೃಪ ಕಾರ್ಯಕ್ರಮ ನಿರೂಪಿಸಿದರು.