ಕಾಸರಗೋಡು: ವಿಶ್ವ ಮಲೇರಿಯಾ ದಿನಾಚರಣೆ ಅಂಗವಾಗಿ ಜಿಲ್ಲಾ ರೋಗವಾಹಕ ನಿಯಂತ್ರಣ ಘಟಕದ ವತಿಯಿಂದ 'ಮಲೇರಿಯಾ ತಡೆಗಟ್ಟುವುದು ನಮ್ಮೆಲ್ಲರ ಕರ್ತವ್ಯ' ಎಂಬ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿತ್ತು. ಜೆಪಿಎಚ್‍ಎನ್ ಶಾಲೆಯಲ್ಲಿ ನಡೆದ ಕಾರ್ಯಕ್ರಮವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಉಪ ಅಧೀಕ್ಷಕಿ ಡಾ. ಗೀತಾ ಗುರುದಾಸ್ ಉದ್ಘಾಟಿಸಿದರು. ಜಿಲ್ಲಾ ವೆಕ್ಟರ್ ನಿಯಂತ್ರಣ ಘಟಕದ ಜೀವಶಾಸ್ತ್ರಜ್ಞ ಇ ರಾಧಾಕೃಷ್ಣನ್ ನಾಯರ್ ಅಧ್ಯಕ್ಷತೆ ವಹಿಸಿದ್ದರು.
ಆರೋಗ್ಯ ಮೇಲ್ವಿಚಾರಕ ವೇಣು ಗೋಪಾಲನ್ ಎಂ ವಿಷಯ ಮಂಡಿಸಿದರು. ಜೆಪಿಎಚ್‍ಎನ್ ಶಾಲಾ ಪ್ರಾಂಶುಪಾಲೆ ಅಂಜು ಥಾಮಸ್, ಆರೋಗ್ಯ ನಿರೀಕ್ಷಕ ಸರಸಿಜನ್ ತಂಬಿ, ಕೀಟ ಸಂಗ್ರಾಹಕ ಸುನಿಲ್ ಕುಮಾರ್ ಎಂ ಉಪಸ್ಥಿತರಿದ್ದರು. ಮಲೇರಿಯಾ ದಿನಾಚರಣೆ ಅಂಗವಾಗಿ ಕಸಬಾ ವಾರ್ಡ್ ಕೌನ್ಸಿಲರ್ ಅಜಿತ್ ಕುಮಾರನ್ ಕರಾವಳಿಯ ಬಾವಿಗಳಲ್ಲಿ ಗುಪ್ಪಿ ಮೀನು ಹೂಡಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಡಿವಿಸಿ ಘಟಕದ ಕ್ಷೇತ್ರ ಸಹಾಯಕ ದೇವದಾಸ್ ವಂದಿಸಿದರು.