ನವದೆಹಲಿ: ಸಾಲ್ಮೊನೆಲ್ಲಾ ಬ್ಯಾಕ್ಟೀರಿಯ ಸೋಂಕಿನ ಆತಂಕದ ಹಿನ್ನೆಲೆಯಲ್ಲಿ ಇಟಲಿಯ ಚಾಕೋಲೆಟ್ ಉತ್ಪನ್ನಗಳ ಸಂಸ್ಥೆ ಫೆರೆರೊ ತನ್ನ ಕಿಂಡರ್ ಚಾಕೋಲೆಟ್‌ಗಳನ್ನು ಅಮೆರಿಕ, ಯುರೋಪ್ ದೇಶಗಳು ಮತ್ತು ಏಷ್ಯಾದ ಹಲವು ದೇಶಗಳ ಮಾರುಕಟ್ಟೆಯಿಂದ ಹಿಂದಕ್ಕೆ ಪಡೆದುಕೊಂಡಿದೆ.
ನವದೆಹಲಿ: ಸಾಲ್ಮೊನೆಲ್ಲಾ ಬ್ಯಾಕ್ಟೀರಿಯ ಸೋಂಕಿನ ಆತಂಕದ ಹಿನ್ನೆಲೆಯಲ್ಲಿ ಇಟಲಿಯ ಚಾಕೋಲೆಟ್ ಉತ್ಪನ್ನಗಳ ಸಂಸ್ಥೆ ಫೆರೆರೊ ತನ್ನ ಕಿಂಡರ್ ಚಾಕೋಲೆಟ್‌ಗಳನ್ನು ಅಮೆರಿಕ, ಯುರೋಪ್ ದೇಶಗಳು ಮತ್ತು ಏಷ್ಯಾದ ಹಲವು ದೇಶಗಳ ಮಾರುಕಟ್ಟೆಯಿಂದ ಹಿಂದಕ್ಕೆ ಪಡೆದುಕೊಂಡಿದೆ.
ಫ್ರಾನ್ಸ್‌ನಲ್ಲಿ ಸಾಲ್‌ಮೊನೆಲ್ಲಾ ಬ್ಯಾಕ್ಟಿರಿಯಾದ 21 ಸೋಂಕು ಪ್ರಕರಣಗಳು ವರದಿಯಾಗಿವೆ. ಇದರಲ್ಲಿ 15 ಕಿಂಡರ್ ಚಾಕೋಲೆಟ್‌ಗಳನ್ನು ಸೇವಿಸಿದ್ದವರೇ ಆಗಿದ್ದಾರೆ ಎಂಬುದು ಗೊತ್ತಾಗಿದೆ. ಬ್ರಿಟನ್‌ನಲ್ಲಿಯೂ 63 ಸಾಲ್‌ಮೊನೆಲ್ಲಾ ಪ್ರಕರಣಗಳು ವರದಿಯಾಗಿವೆ. ಸಾಲ್‌ಮೊನೆಲ್ಲಾ ಪ್ರಕರಣಗಳಿಗೆ ಕಿಂಡರ್‌ನ ನಂಟಿರುವ ಬಗ್ಗೆ ಬ್ರಿಟನ್, ಅಮೆರಿಕದ ಆಹಾರ ಸುಕ್ಷತಾ ಪ್ರಾಧಿಕಾರಗಳು ಅನುಮಾನ ವ್ಯಕ್ತಪಡಿಸಿವೆ.
ಕಿಂಡರ್‌ನಿಂದ ಸೋಂಕು ಹರಡುತ್ತಿದೆ ಎಂಬ ಭೀತಿಯ ಹಿನ್ನೆಲೆಯಲ್ಲಿ ಬೆಲ್ಜಿಯಂನ ಕಾರ್ಖಾನೆಯನ್ನು ಶುಕ್ರವಾರ ಮುಚ್ಚಲಾಗಿದೆ. ಅಲ್ಲದೆ, ಬ್ರಿಟನ್, ಜರ್ಮನಿ, ಫ್ರಾನ್ಸ್, ಹಾಂಗ್‌ಕಾಂಗ್, ಸಿಂಗಾಪುರ ಮತ್ತು ಅಮೆರಿಕದಿಂದ ಚಾಕೋಲೆಟ್ ಉತ್ಪನ್ನಗಳನ್ನು ಫೆರೆರೊ ಹಿಂದಕ್ಕೆ ಪಡೆದಿದೆ.
'ಮಾರುಕಟ್ಟೆಗೆಗೆ ಬಿಡುಗಡೆಯಾದ ಕಿಂಡರ್ ಉತ್ಪನ್ನಗಳಲ್ಲಿ ಸಾಲ್ಮೊನೆಲ್ಲಾ ಇರಲಿಲ್ಲ. ಆದರೆ ಸಾಲ್ಮೊನೆಲ್ಲಾ ಸೋಂಕು ಪತ್ತೆಯಾದ ಬೆಲ್ಜಿಯಂನಲ್ಲಿ ಅವುಗಳನ್ನು ತಯಾರಿಸಿದ ಕಾರಣ ಚಾಕೋಲೆಟ್ ಉತ್ಪನ್ನಗಳನ್ನು ಹಿಂದಕ್ಕೆ ಪಡೆಯಲು ನಿರ್ಧಾರಿಸಲಾಗಿದೆ' ಎಂದು ಫೆರೆರೊ ಹೇಳಿದೆ.
ಉತ್ಪನ್ನಗಳನ್ನು ಹಿಂಪಡೆಯುವ ದೇಶಗಳ ಪಟ್ಟಿಯಿಂದ ಭಾರತವನ್ನು ಹೊರಗಿಡಲಾಗಿದೆ ಎಂದು ಮಾಧ್ಯಮ ಹೇಳಿಕೆಯಲ್ಲಿ ಚಾಕೋಲೆಟ್ ತಯಾರಕ ಸಂಸ್ಥೆ ಫೆರೆರೊ ತಿಳಿಸಿದೆ. ಪುಣೆಯಲ್ಲಿರುವ ತನ್ನ ಕಾರ್ಖಾನೆಯಲ್ಲಿ ಫೆರೆರೊ ಸಂಸ್ಥೆಯು ಕಿಂಡರ್ ಚಾಕೋಲೆಟ್‌ಗಳನ್ನು ತಯಾರಿಸುತ್ತಿದೆ.
ಸಾಲ್‌ಮೊನೆಲ್ಲಾ ಎಂಬುದು ಬ್ಯಾಕ್ಟೀರಿಯ. ಅದು ಅತಿಸಾರ, ಜ್ವರ, ಹೊಟ್ಟೆ ನೋವು ಸೇರಿದಂತೆ ಹಲವು ಬಗೆಯ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ. ಸಾಮಾನ್ಯವಾಗಿ ಆಹಾರದ ಮೂಲಕವೇ ಈ ಸೋಂಕು ಹರಡುತ್ತದೆ ಎಂದು ತಜ್ಞರು ಹೇಳಿದ್ದಾರೆ.