ಬದಿಯಡ್ಕ: ಅಗಲ್ಪಾಡಿ ನಡುಮನೆ ಪಡಿಪ್ಪುರೆ ಶ್ರೀ ವಿಷ್ಣುಮೂರ್ತಿ ಸೇವಾ ಸಮಿತಿ ಶ್ರೀ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲ ಮಹೋತ್ಸವವು ಏ.30 ಹಾಗೂ ಮೇ 1ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಇದರಂಗವಾಗಿ ಶನಿವಾರ ಬೆಳಗ್ಗೆ ಮೇಲೇರಿ ಕೂಡಿಸುವುದು, ಸಂಜೆ ಉಬ್ರಂಗಳ ಶ್ರೀ ಐವರು ವಿಷ್ಣುಮೂರ್ತಿ ಚಾಮುಂಡಿ ದೈವಸ್ಥಾನದಿಂದ ದೈವದ ಭಂಡಾರ ಹೊರಡುವುದು, ಮೇಲೇರಿಗೆ ಅಗ್ನಿ ಸ್ಪರ್ಶ, ಅನ್ನದಾನ, ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿರುವುದು.
ಭಾನುವಾರ ಶ್ರೀ ದೈವದ ಕುಳಿಚ್ಚಾಟ, ಶ್ರೀ ದೈವದ ಮೇಲೇರಿ ಪ್ರವೇಶ, ಅರಸಿನ ಹುಡಿ ಪ್ರಸಾದ ವಿತರಣೆ, ಭಂಡಾರ ಹೊರಡುವುದರೊಂದಿಗೆ ಕಾರ್ಯಕ್ರಮ ಸಮಾಪ್ತಿಗೊಳ್ಳಲಿದೆ.