ನವದೆಹಲಿ :ಟೆಸ್ಲಾ ಸಿಇಒ ಎಲಾನ್ ಮಸ್ಕ್ ಅವರು ಟ್ವಿಟ್ಟರ್ ಷೇರಿನಲ್ಲಿ ದೊಡ್ಡ ಪಾಲು ಖರೀದಿಸಿರುವುದು, ಸಮಾಜ ಮಾಧ್ಯಮ ಜಾಲತಾಣದ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗೆಗಿನ ನಿಲುವಿನಲ್ಲಿ ಪ್ರಕ್ಷುಬ್ಧತೆಯ ಸಾಧ್ಯತೆ ಎದುರಾಗಿದೆ.
ನವದೆಹಲಿ :ಟೆಸ್ಲಾ ಸಿಇಒ ಎಲಾನ್ ಮಸ್ಕ್ ಅವರು ಟ್ವಿಟ್ಟರ್ ಷೇರಿನಲ್ಲಿ ದೊಡ್ಡ ಪಾಲು ಖರೀದಿಸಿರುವುದು, ಸಮಾಜ ಮಾಧ್ಯಮ ಜಾಲತಾಣದ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗೆಗಿನ ನಿಲುವಿನಲ್ಲಿ ಪ್ರಕ್ಷುಬ್ಧತೆಯ ಸಾಧ್ಯತೆ ಎದುರಾಗಿದೆ.
ಕಂಪನಿಯ ಶೇಕಡ 9.2ರಷ್ಟು ಪಾಲನ್ನು ಈ ಕೋಟ್ಯಧಿಪತಿ ಖರೀದಿಸಿದ್ದು, ಇದರ ಮೌಲ್ಯ ಸುಮಾರು 300 ಕೋಟಿ ಡಾಲರ್ ಎಂದು ಅಂದಾಜಿಸಲಾಗಿದೆ ಎಂದು ಅಮೆರಿಕದ ಸೆಕ್ಯುರಿಟೀಸ್ ಆಯಂಡ್ ಎಕ್ಸ್ ಚೇಂಜ್ ಕಮಿಷನ್‍ಗೆ ಸಲ್ಲಿಸಿದ ಫೈಲಿಂಗ್‍ನಲ್ಲಿ ಹೇಳಲಾಗಿದೆ.
ಈ ಘೋಷಣೆ ಬಳಿಕ ಕಂಪನಿಯ ಷೇರುಗಳು ಶೇಕಡ 25ರಷ್ಟು ಹೆಚ್ಚಿದ್ದು, ಆ ಬಳಿಕ ಮಸ್ಕ್ ಅವರು, "ಓಹ್ ಹೈ ಲಾಲ್" ಎಂದು ಟ್ವೀಟ್ ಮಾಡಿದ್ದಾರೆ.
ಟ್ವಿಟ್ಟರ್‍ನ ಅತ್ಯಂತ ಜನಪ್ರಿಯ ಬಳಕೆದಾರರಲ್ಲಿ ಒಬ್ಬರಾಗಿರುವ ಮಸ್ಕ್, 80 ದಶಲಕ್ಷಕ್ಕೂ ಅಧಿಕ ಅನುಯಾಯಿಗಳನ್ನು ಹೊಂದಿದ್ದಾರೆ. ತಮ್ಮ ಜೀವನದ ಹಾಗೂ ಕಂಪನಿಗಳ ಅಪ್‍ಡೇಟ್‍ಗಳನ್ನು ಕೂಡಾ ಮಸ್ಕ್, ಟ್ವಿಟ್ಟರ್ ಮೂಲಕವೇ ಮಾಡುತ್ತಿದ್ದಾರೆ.
ಮಾರ್ಚ್ 24ರಂದು ಮಸ್ಕ್ ಮಾಡಿದ ಟ್ವೀಟ್‍ನಲ್ಲಿ, "ಟ್ವಿಟ್ಟರ್ ಅಲ್ಗರಿಥಮ್‍ನ ಡಿಫ್ಯಾಕ್ಟೊ ಪಕ್ಷಪಾತದ ಬಗ್ಗೆ ಆತಂಕ ಇದೆ. ಏಕೆಂದರೆ ಇದು ಸಾರ್ವಜನಿಕ ವಿವರಣೆ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ" ಎಂದು ಹೇಳಿದ್ದರು.
ಅಲ್ಗರಿಥಮ್ ಓಪನ್ ಸೋರ್ಸ್ ಹೊಂದಿರಬೇಕೇ ಎಂಬ ಬಗ್ಗೆ ತಮ್ಮ ಅನುಯಾಯಿಗಳ ಅಭಿಪ್ರಾಯವನ್ನೂ ಆಹ್ವಾನಿಸಿದ್ದರು. ಪ್ರಜಾಪ್ರಭುತ್ವದಲ್ಲಿ ಮುಕ್ತ ವಾಕ್ ಸ್ವಾತಂತ್ರ್ಯ ಅಗತ್ಯ ಎಂದು ಮರುದಿನ ಅವರು ಟ್ವೀಟ್ ಮಾಡಿದ್ದರು.