ಕಾಸರಗೋಡು: ಐಎಂಎ, ಐಎಪಿ ಕಾಞಂಗಾಡ್ ಜಿಲ್ಲಾ ಆಸ್ಪತ್ರೆ ಹಾಗೂ ಎನ್ ಎಚ್ ಎಂ ಕಾಸರಗೋಡು ಇವರ ಸಹಯೋಗದಲ್ಲಿ ಹಿಮೋಫಿಲಿಯಾ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು. ಉಪ ಡಿಎಂಒ ಇ ಮೋಹನನ್ ಉದ್ಘಾಟಿಸಿದರು. ಅಧ್ಯಕ್ಷ ಡಾ.ಟಿ.ವಿ.ಪದ್ಮನಾಭನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಆಸ್ಪತ್ರೆ ಅಧೀಕ್ಷಕ ಕೆ.ವಿ.ಪ್ರಕಾಶ್ ಗುರುತಿನ ಚೀಟಿ ವಿತರಿಸಿದರು. ಎನ್ ಎಚ್ ಎಂ ನೇತೃತ್ವದಲ್ಲಿ ನೋಟ್ ಬುಕ್ ವಿತರಿಸಲಾಯಿತು. ನೋಡಲ್ ಅಧಿಕಾರಿ ಡಾ.ಇ.ಕೆ.ಆಶಾ ತರಗತಿ ನಡೆಸಿದರು. ಆಯುಷ್ ಅಧ್ಯಕ್ಷ ಡಾ.ಅಭಿಲಾಷ್, ಡಿಡಿಸಿಸಿ ನರ್ಸಿಂಗ್ ಸಂಯೋಜಕಿ ಕೆ.ದಿವ್ಯಾ, ಜಿಲ್ಲಾ ಹಿಮೋಫಿಲಿಯಾ ಸೊಸೈಟಿ ಕಾರ್ಯದರ್ಶಿ ಅನೂಪ್ ಪೆರಿಯಾಲ್ ಮಾತನಾಡಿದರು. ಐಎಪಿ ಕಾರ್ಯದರ್ಶಿ ಡಾ.ಅಶ್ವಿನ್ ಸ್ವಾಗತಿಸಿ, ಎನ್ ಎಚ್ ಎಂ ಹಿಮೋಫಿಲಿಯಾ ಸಂಯೋಜಕಿ ಅನು ಅರವಿಂದನ್ ವಂದಿಸಿದರು.