HEALTH TIPS

ಒಂದೇ ಬಾರಿ ಎರಡು ಪದವಿ ಕೋರ್ಸ್‌ ಕಲಿಕೆಗೆ ಅವಕಾಶ: ಯುಜಿಸಿ

              ನವದೆಹಲಿ : 'ವಿದ್ಯಾರ್ಥಿಗಳು ಇನ್ನು ಮುಂದೆ ಭೌತಿಕವಾಗಿ ಏಕಕಾಲದಲ್ಲಿಯೇ ಪೂರ್ಣಾವಧಿಯ ಎರಡು ಪದವಿ ಕೋರ್ಸ್‌ಗಳನ್ನು ಕಲಿಯಬಹುದು. ಈ ಪದವಿ ಕೋರ್ಸ್‌ಗಳನ್ನ ವಿದ್ಯಾರ್ಥಿಗಳು ಒಂದೇ ವಿಶ್ವವಿದ್ಯಾಲಯ ಅಥವಾ ಬೇರೆ ಬೇರೆ ವಿಶ್ವವಿದ್ಯಾಲಯಗಳಲ್ಲಿ ಕಲಿಯಲು ಅವಕಾಶ ನೀಡಲಾಗುತ್ತದೆ' ಎಂದು ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗದ (ಯುಜಿಸಿ) ಅಧ್ಯಕ್ಷ ಜಗದೀಶ್‌ ಕುಮಾರ್‌ ತಿಳಿಸಿದ್ದಾರೆ.

               ಈ ಕುರಿತು ಯುಜಿಸಿ ಶೀಘ್ರದಲ್ಲೇ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಿದೆ.

                'ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಪ್ರಕಟಿಸಿರುವಂತೆ ಮತ್ತು ವಿದ್ಯಾರ್ಥಿಗಳು ಬಹುಮುಖಿ ಕೌಶಲ್ಯಗಳನ್ನ ವೃದ್ಧಿಸಿಕೊಳ್ಳಬೇಕು ಎನ್ನುವ ಆಶಯದೊಂದಿಗೆ ಈ ಅವಕಾಶವನ್ನ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ' ಎಂದು ಜಗದೀಶ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

               ವಿದ್ಯಾರ್ಥಿಗಳು ಎರಡು ಪದವಿಯನ್ನು ಏಕಕಾಲದಲ್ಲಿ ಭೌತಿಕ ಮತ್ತು ಆನ್‌ಲೈನ್‌ ಮಾದರಿಯಲ್ಲಿ ಪಡೆಯಲು ಕೂಡ ಅವಕಾಶ ಕಲ್ಪಿಸಲಾಗುತ್ತದೆ ಎಂದೂ ಹೇಳಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries