ಹೈದರಾಬಾದ್: ಐಟಿ ಸಾಮಾನ್ಯವಾಗಿ ಎಂಜಿನಿಯರಿಂಗ್ ಕಾಲೇಜುಗಳು ಹಾಗೂ ಕಂಪ್ಯೂಟರ್ ಕೋರ್ಸ್ ಗಳನ್ನು ಹೊಂದಿರುವ ಕಾಲೇಜುಗಳ ವಿದ್ಯಾರ್ಥಿಗಳಿಗಾಗಿ ಕ್ಯಾಂಪಸ್ ಡ್ರೈವ್ ಕಾರ್ಯಕ್ರಮಗಳನ್ನು ಮಾಡಿ ಉದ್ಯೋಗಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಿತ್ತು. ಇದೀಗ ಕಂಪನಿಗಳು ಐಟಿಯೇತರ ಅಭ್ಯರ್ಥಿಗಳಿಗೆ ಮಣೆ ಹಾಕುತ್ತಿರುವ ಬೆಲವಣಿಗೆ ಕಂಡು ಬಂದಿದೆ.
ಐಟಿ ಕ್ಷೇತ್ರದಲ್ಲಿ ಸ್ಕಿಲ್ಡ್ ಅಭ್ಯರ್ಥಿಗಳ ಕೊರತೆ ಹೆಚ್ಚಿದ್ದು ಜೊತೆಗೆ ಐಟಿ ಕ್ಷೇತ್ರ ಹೆಚ್ಚಿನ ವೇಗದಲ್ಲಿ ಬೆಳವಣಿಗೆ ಕಾಣುತ್ತಿರುವುದರಿಂದ ಹೆಚ್ಚಿನ ಉದ್ಯೋಗಿಗಳು ಸಂಸ್ಥೆಗಳಿಗೆ ಬೇಕಾಗುತ್ತಿದ್ದಾರೆ.
ಇವೆಲ್ಲದರಿಂದಾಗಿ ಐಟಿಯೇತರ ಅಭ್ಯರ್ಥಿಗಳನ್ನು ಆರಿಸಿ ತರಬೇತಿ ನೀಡಿ ಅವರಿಗೆ ತಾಂತ್ರಿಕ ಹುದ್ದೆಗಳನ್ನು ನೀಡುವ ಕೆಲಸಕ್ಕೆ ಐಟಿ ಸಂಸ್ಥೆಗಳು ಮುಂದಾಗುತ್ತಿವೆ. ಐಟಿ ಕಂಪನಿಗಳ ಈ ಹೊಸ ವರಸೆಯ ಹಿಂದೆ ದುಡ್ಡು ಉಳಿಸುವ ಉದ್ದೇಶವೂ ಅಡಗಿದೆ ಎಂದು ಪರಿಣತರು ಅಭಿಪ್ರಾಯಪಟ್ಟಿದ್ದಾರೆ.