ಮಿಲಿಟರಿ ಗುಪ್ತವಾರ್ತೆ ಸೇರಿದಂತೆ ಗುಪ್ತಚರ ಸಂಸ್ಥೆಗಳು ಸೇನೆಯ ಹಾಲಿ ಸಿಬ್ಬಂದಿಗಳನ್ನೊಳಗೊಂಡ ವಾಟ್ಸ್‌ಆಯಪ್ ಗುಂಪಿನಲ್ಲಿ ವಿದೇಶಿ ಮೂಲದ ದೂರವಾಣಿ ಸಂಖ್ಯೆಯನ್ನು ಪತ್ತೆಹಚ್ಚುವ ಮೂಲಕ ಸೈಬರ್ ಭದ್ರತೆ ಉಲ್ಲಂಘನೆಯನ್ನು ಬಯಲಿಗೆಳೆದಿವೆ.
ಮಿಲಿಟರಿ ಗುಪ್ತವಾರ್ತೆ ಸೇರಿದಂತೆ ಗುಪ್ತಚರ ಸಂಸ್ಥೆಗಳು ಸೇನೆಯ ಹಾಲಿ ಸಿಬ್ಬಂದಿಗಳನ್ನೊಳಗೊಂಡ ವಾಟ್ಸ್‌ಆಯಪ್ ಗುಂಪಿನಲ್ಲಿ ವಿದೇಶಿ ಮೂಲದ ದೂರವಾಣಿ ಸಂಖ್ಯೆಯನ್ನು ಪತ್ತೆಹಚ್ಚುವ ಮೂಲಕ ಸೈಬರ್ ಭದ್ರತೆ ಉಲ್ಲಂಘನೆಯನ್ನು ಬಯಲಿಗೆಳೆದಿವೆ.
ಉಲ್ಲಂಘನೆ ನಡೆದಿರುವುದನ್ನು ದೃಢಪಡಿಸಿದ ಅಧಿಕಾರಿಯೋರ್ವರು, ನಮ್ಮ ಹಾಲಿ ಸಿಬ್ಬಂದಿಗಳನ್ನೂ ಒಳಗೊಂಡಿರುವ ವಾಟ್ಸ್‌ಆಯಪ್ ಗುಂಪಿನಲ್ಲಿ ಪಾಕಿಸ್ತಾನದ ಗುಪ್ತಚರ ಏಜೆಂಟ್ ಓರ್ವನ ನಂಬರ್‌ನ್ನು ಪತ್ತೆ ಹಚ್ಚಲಾಗಿದೆ ಎಂದು ತಿಳಿಸಿದರು.
ಉಲ್ಲಂಘನೆಯ ವ್ಯಾಪ್ತಿಯನ್ನು ಖಚಿತಪಡಿಸಿಕೊಳ್ಳಲು ವಿಚಾರಣೆಗೆ ಆದೇಶಿಸಲಾಗಿದೆ ಎಂದರು.
ಮಾಹಿತಿಗಳನ್ನು ಸಂಗ್ರಹಿಸಲು ಸಾಮಾಜಿಕ ಮಾಧ್ಯಮ ಗುಂಪುಗಳಲ್ಲಿ ತೂರಿಕೊಳ್ಳಲು ಚೀನಿ ಮತ್ತು ಪಾಕಿಸ್ತಾನಿ ಗುಪ್ತಚರ ಸಂಸ್ಥೆಗಳು ತೀವ್ರ ಪ್ರಯತ್ನಗಳನ್ನು ನಡೆಸುತ್ತಲೇ ಬಂದಿವೆ.
ನಾಗರಿಕರು ಅಥವಾ ಗುರುತು ದೃಢೀಕರಿಸಿಕೊಳ್ಳಲು ಸಾಧ್ಯವಾಗದ ವ್ಯಕ್ತಿಗಳು ಹುಟ್ಟಹಾಕುವ ಯಾವುದೇ ಸಾಮಾಜಿಕ ಮಾಧ್ಯಮ ಗುಂಪುಗಳಿಂದ ದೂರವಿರುವಂತೆ ಸೇನೆಯು ಈ ಹಿಂದೆ ತನ್ನ ಎಲ್ಲ ಅಧಿಕಾರಿಗಳಿಗೆ ಸೂಚಿಸಿತ್ತು.