ಕೋಝಿಕ್ಕೋಡ್: ಸಾಮಾಜಿಕ ಜಾಲತಾಣಗಳಲ್ಲಿ ಧರ್ಮ ವಿರೋಧಿ ಪೋಸ್ಟ್‍ಗಳನ್ನು ಹರಡಿದ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ. ಕೋಝಿಕ್ಕೋಡ್ ಕಸಬಾ ಮತ್ತು ಟೌನ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಪಾಲಕ್ಕಾಡ್‍ನಲ್ಲಿ ನಡೆದ ಜೋಡಿ ಕೊಲೆಯ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಪಾಲಕ್ಕಾಡ್ ಆರ್ ಎಸ್ ಎಸ್ ಕಾರ್ಯಕರ್ತ ಮತ್ತು ಎಸ್‍ಡಿಪಿಐ ಕಾರ್ಯಕರ್ತನ ಹತ್ಯೆಯ ನಂತರ ಪೋಲೀಸ್ ಕಣ್ಗಾವಲು ಬಿಗಿಗೊಳಿಸಲಾಗಿದೆ. ಪ್ರಚೋದನಕಾರಿ ಸಂದೇಶಗಳನ್ನು ಹರಡುವ ಗುಂಪುಗಳು ಮತ್ತು ಗ್ರೂಪ್ ಅಡ್ಮಿನ್‍ಗಳ ಮೇಲೆ ಪೋಲೀಸರು ನಿಗಾ ಇರಿಸಿದ್ದಾರೆ. ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೋಲೀಸರು ತಿಳಿಸಿದ್ದಾರೆ.
ಏತನ್ಮಧ್ಯೆ, ಜೋಡಿ ಕೊಲೆಗಳ ನಂತರ ಹೆಚ್ಚಿನ ಘಟನೆಗಳನ್ನು ತಡೆಯಲು ಪಾಲಕ್ಕಾಡ್ ನಲ್ಲಿ ಸುಮಾರು ಒಂದು ಸಾವಿರ ಪೋಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಪಾಲಕ್ಕಾಡ್ ಆಲಪ್ಪುಳ ಜೋಡಿ ಕೊಲೆಯ ಪುನರಾವರ್ತನೆಯಾಗಿದೆ, ಕೊಲೆ ಮಾಡಿದ ರೀತಿ, ಆಯ್ಕೆಮಾಡಿದ ಸ್ಥಳ ಮತ್ತು ಸಮಯಗಳ ಮಧ್ಯೆ ಹೋಲಿಕೆಗಳಿವೆ . ಆದರೆ, ನಿಖರ ಮಾಹಿತಿ ಸಿಕ್ಕರೂ, ಅಪಾಯ ಹೆಚ್ಚಿರುವ ಪ್ರದೇಶಗಳಲ್ಲೂ ಪೋಲೀಸರಿಗೆ ರಕ್ಷಣೆ ನೀಡಲು ಸಾಧ್ಯವಾಗಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ.