ಕಾಸರಗೋಡು: ಕೇರಳದ ಕೇಂದ್ರೀಯ ವಿಶ್ವವಿದ್ಯಾಲಯದ ಕಾಸರಗೋಡು ಪೆರಿಯ ಕ್ಯಾಂಪಸ್‍ನಲ್ಲಿ ನೂತನವಾಗಿ ಆಯ್ಕೆಯಾದ ವಿದ್ಯಾರ್ಥಿ ಪರಿಷತ್ ಪದಾಧಿಕಾರಿಗಳ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆಯಿತು. ವಿಶ್ವ ವಿದ್ಯಾಲಯದ ಉಪಕುಲಪತಿ ಪೆÇ್ರ.ಎಚ್.ವೆಂಕಟೇಶ್ವರಲು ಪ್ರಮಾಣ ವಚನ ಬೋಧಿಸಿದರು. ಕೃಷ್ಣ ಪ್ರಭಾತ್ (ಅಧ್ಯಕ್ಷರು), ಅಖಿಲ್ ಕೆ.ಸಿ (ಕಾರ್ಯದರ್ಶಿ), ಶ್ರೀರಾಜ್ ಸಿ.ವಿ., ವಿ. ಭಾವನಾ (ಉಪಾಧ್ಯಕ್ಷರು), ಅಜಿತ್ ಸುರೇಶ್, ಜ್ಯೋತಿ ಮೋನಿಕಾ ಕ್ರಾಸ್ತಾ (ಜಂಟಿ ಕಾರ್ಯದರ್ಶಿಗಳು), ನಂದಗೋಪನ್ ಪಿಟಿ, ಕುರ್ಯಾಚನ್ ಜೋಸಿ, ಅನು ಎಸ್,ಎಲ್ಸಾ ಮ್ಯಾಥ್ಯೂ (ಕಾರ್ಯಕಾರಿ ಸಮಿತಿ ಸದಸ್ಯರು) ಆಯ್ಕೆಯಾದರು. ಸಬರಮತಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂತೋಷ್ ಕುಮಾರ್, ಪರೀಕ್ಷಾ ನಿಯಂತ್ರಣಾಧಿಕಾರಿ ಡಾ.ಎಂ. ಮುರಳೀಧರನ್ ನಂಬಿಯಾರ್, ವಿದ್ಯಾರ್ಥಿ ಕಲ್ಯಾಣ ವಿಭಾಗದ ಡೀನ್ ಪೆÇ್ರ.ಕೆ.ಅರುಣ್ ಕುಮಾರ್, ಪೆÇ್ರ. ಮತ್ತು ಡೆನ್ನಿಸ್ ಥಾಮಸ್ ಮುಂತದವರು ಉಪಸ್ಥಿತರಿದ್ದರು.