ಕುಂಬಳೆ: ವಿಶ್ವ ಆರೋಗ್ಯ ಸಂಸ್ಥೆಯ ನಿರ್ದೇಶಾನುಸಾರ ಅಧಿಕ ರಕ್ತದೊತ್ತಡ ಮತ್ತು ಮಧುಮೇಹದಂತಹ ಜೀವನಶೈಲಿ ರೋಗಗಳ ಚಿಕಿತ್ಸೆ ಮತ್ತು ನಿಯಂತ್ರಣದ ಕುರಿತು ಆರೋಗ್ಯ ವೃತ್ತಿಪರರಿಗೆ ಕುಂಬಳೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಒಂದು ದಿನದ ತರಬೇತಿಯನ್ನು ನಡೆಸಲಾಯಿತು. ಕಾರ್ಯಕ್ರಮವನ್ನು ವೈದ್ಯಾಧಿಕಾರಿ ಡಾ.ಕೆ.ದಿವಾಕರ ರೈ ಉದ್ಘಾಟಿಸಿದರು.
ಕುಂಬಳೆ, ಬದಿಯಡ್ಕ, ಆರಿಕ್ಕಾಡಿ, ಮಧೂರು, ಪುತ್ತಿಗೆ, ಅಂಗಡಿಮೊಗರು, ಪೆರ್ಲ, ಕುಂಬ್ಡಾಜೆ, ಬೆಳ್ಳೂರು ಮತ್ತು ವಾಣಿನಗರದ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳು, ಆರೋಗ್ಯ ನಿರೀಕ್ಷಕರು, ಪಿಎಚ್‍ಎನ್‍ಗಳು, ಫಾರ್ಮಸಿಸ್ಟ್‍ಗಳು ಮತ್ತು ಸ್ಟಾಫ್ ನರ್ಸ್‍ಗಳಿಗೆ ತರಬೇತಿ ನೀಡಲಾಯಿತು. ತರಬೇತಿಯು ವಿಶ್ವ ಆರೋಗ್ಯ ಸಂಸ್ಥೆಯ ಭಾರತ ಅಧಿಕ ರಕ್ತದೊತ್ತಡ ನಿಯಂತ್ರಣ ಉಪಕ್ರಮದ ಸಹಯೋಗದಲ್ಲಿ ನಡೆಸಲಾಗಿದೆ. ಆರೋಗ್ಯ ಮೇಲ್ವಿಚಾರಕ ಬಿ.ಅಶ್ರಫ್ ಸ್ವಾಗತಿಸಿ, ಡಬ್ಲ್ಯುಎಚ್‍ಒ ಸಲಹೆಗಾರ ಡಾ.ದೀನದಯಾಳ್ ಮತ್ತು ಅನೂಪ್ ಜೇಕಬ್ ತರಗತಿಯಲ್ಲಿ ಭಾಗವಹಿಸಿದ್ದರು. ಡಾ.ಸೈಯದ್ ಸುಹೈಬ್ ತಂಗಳ್, ಡಾ.ಅಖಿಲ್, ಆರೋಗ್ಯ ನಿರೀಕ್ಷಕರಾದ ಗಿರೀಶ್, ಗನ್ನಿಮೋಳ್, ಫಾರ್ಮಾಸಿಸ್ಟ್ ಶಾಜಿ ಮಾತನಾಡಿದರು.