ವಾರಣಾಸಿ: ಉತ್ತರ ಪ್ರದೇಶದ ಪರಿಷತ್ ಚುನಾವಣೆಯಲ್ಲಿ ಆಡಳಿತಾರೂಢ, ಬಿಜೆಪಿ ಮುನ್ನಡೆ ಸಾಧಿಸಿದ್ದು, ಬಾರಾಬಂಕಿ ಹಾಗೂ ಅಯೋಧ್ಯೆಯನ್ನು ಗೆದ್ದಿದೆ. ಆದರೆ ವಾರಾಣಾಸಿ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯ ವಿರುದ್ಧ ಸೋತಿದೆ.
ಉತ್ತರ ಪ್ರದೇಶದ ಮೇಲ್ಮನೆಯ 36 ಸ್ಥಾನಗಳಿಗೆ ಚುನಾವಣೆ ನಡೆದಿದೆ. 9 ಸ್ಥಾನಗಳಿಗೆ ಬಿಜೆಪಿಯ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದರು. ಉಳಿದ 27 ಕ್ಷೇತ್ರಗಳಿಗೆ ಏ.09 ರಂದು, ಪ್ರಧಾನಿ ಮೋದಿ ಪ್ರತಿನಿಧಿಸುವ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ಸುದಾಮ ಪಟೇಲ್, 170 ಮತಗಳನ್ನಷ್ಟೇ ಪಡೆದರು ಪಕ್ಷೇತರ ಅಭ್ಯರ್ಥಿ ಅನ್ನಪೂರ್ಣ ಸಿಂಗ್ 4,234 ಮತಗಳನ್ನು ಪಡೆದರು, ಸಮಾಜವಾದಿ ಪಕ್ಷದ ಉಮೇಶ್ ಯಾದವ್ 345 ಮತಗಳನ್ನು ಪಡೆದಿದ್ದರು.
ಮಾಜಿ ಪ್ರಧಾನಿ ಚಂದ್ರಶೇಖರ್ ಅವರ ಮೊಮ್ಮಗ ಬಿಜೆಪಿ ಅಭ್ಯರ್ಥಿ ರವಿಶಂಕರ್ ಸಿಂಗ್ ಪಪ್ಪು ಬಲ್ಲಿಯಾ ಸ್ಥಾನದಿಂದ ಎಸ್ ಪಿ ಅಭ್ಯರ್ಥಿ ಅರವಿಂದ್ ಗಿರಿ ವಿರುದ್ಧ 1,981 ಮತಗಳಿಂದ ಗೆದ್ದಿದ್ದಾರೆ.