HEALTH TIPS

ರೈಲು ಹಾದು ಹೋಗುತ್ತಿದ್ರೂ ಹಳಿಯ ಮೇಲೆ ಮಲಗಿ ಮೊಬೈಲ್​ನಲ್ಲಿ ಬಿಜಿಯಾಗಿದ್ದ ಮಹಿಳೆ: ವಿಡಿಯೋ ವೈರಲ್​!

           ನವದೆಹಲಿ: ಮೇಲೆ ರೈಲು ಚಲಿಸುತ್ತಿದ್ದರು ಏನು ಆಗೇ ಇಲ್ಲ ಎನ್ನುವಂತೆ ಮಹಿಳೆಯೊಬ್ಬಳು ಕೆಳಗಿನ ಹಳಿಯ ಮೇಲೆ ಮಲಗಿ ಆರಾಮವಾಗಿ ಮೊಬೈಲ್​ನಲ್ಲಿ ಮಾತನಾಡುತ್ತಿರುವ ಶಾಕಿಂಗ್​ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

             ಈ ವಿಡಿಯೋವನ್ನು ಐಪಿಎಸ್​ ಅಧಿಕಾರಿ ದೀಪಾನ್ಸು ಕಾಬ್ರಾ ಅವರು ಏಪ್ರಿಲ್​ 12ರಂದು ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿದ್ದು, ಫೋನ್‌ನಲ್ಲಿ ಗಾಸಿಪ್ ಮಾಡುವುದೇ ಹೆಚ್ಚು ಮುಖ್ಯ ಎಂದು ಅಡಿಬರಹ ನೀಡಿದ್ದಾರೆ.


                   ಸದ್ಯ ಈ ವಿಡಿಯೋ ಒಂದು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ.

           ವಿಡಿಯೋದಲ್ಲಿ ಏನಿದೆ?: ಗೂಡ್ಸ್​ ರೈಲೊಂದು ರೈಲು ನಿಲ್ದಾಣವನ್ನು ದಾಟುತ್ತಿದಂತೆ ಅದರ ಕೆಳಗೆ ಮಲಗಿದ್ದ ತಲೆಗೆ ದುಪ್ಪಟ್ಟ ಸುತ್ತಿಕೊಂಡಿದ್ದ ಮಹಿಳೆಯೊಬ್ಬಳು ಎದ್ದು ನಿಲ್ಲುತ್ತಾಳೆ. ಈ ವೇಳೆ ಆಕೆ ಮೊಬೈಲ್​ನಲ್ಲಿ ಯಾರೊಂದಿಗೆ ಮಾತನಾಡುತ್ತಿರುತ್ತಾಳೆ. ರೈಲು ತನ್ನ ಮೇಲೆಯೇ ಹಾದು ಹೋಗಿದೆ ಎಂಬ ಒಂದು ಚೂರು ಭಯವೂ ಆಕೆಯ ವರ್ತನೆಯಲ್ಲಿ ಕಾಣಿಸುವುದಿಲ್ಲ.

                  ಈ ಘಟನೆ ಎಲ್ಲಿ ನಡೆದಿದೆ ಎಂಬುದರ ಬಗ್ಗೆ ಮಾಹಿತಿ ಇಲ್ಲ. ಆದರೆ, ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿದ್ದು, ನೆಟ್ಟಿಗರು ಮಹಿಳೆಯ ಬೇಜವಾಬ್ದಾರಿ ವಿರುದ್ಧ ಕಿಡಿಕಾರಿದ್ದಾರೆ. ಆಕೆಯ ಕಪಾಳಕ್ಕೆ ಒಂದು ಬಾರಿಸಬೇಕಿತ್ತು ಎಂದು ಕಾಮೆಂಟ್​ ಮಾಡಿದ್ದಾರೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries