ಕೊಲಂಬೊ: ದೇಶದ ಮೇಲಿನ ಎಲ್ಲಾ ಭರವಸೆಗಳು ಹುಸಿಯಾಗಿವೆ ಮತ್ತು ದೇಶದಲ್ಲಿ ಗಲಭೆಗಳು ತಾಂಡವವಾಡುತ್ತಿದೆ ಎಂದು ಶ್ರೀಲಂಕಾದ ಗಾಂಧಿ ಎಟಿ ರತ್ನ ಹೇಳಿದ್ದಾರೆ. ತನ್ನ ಮೂಲಭೂತ ಅಗತ್ಯಗಳನ್ನು ಮರೆತು ಬೃಹತ್ ಅಭಿವೃದ್ಧಿ ಯೋಜನೆಗಳ ಮೊರೆ ಹೋಗಿರುವ ಕೇರಳಕ್ಕೆ ಶ್ರೀಲಂಕಾ ಪಾಠವಾಗಿದೆ ಎಂದಿರುವರು.
ಬಂದರುಗಳು ಮತ್ತು ಕಟ್ಟಡಗಳನ್ನು ನಿರ್ಮಿಸುವ ಮೂಲಕ ಚೀನಾ ಶ್ರೀಲಂಕಾವನ್ನು ವಸಾಹತುವನ್ನಾಗಿ ಮಾಡಿತು. ಶ್ರೀಲಂಕಾದಲ್ಲಿರುವ ಸಾವಿರಾರು ಚೀನೀ ಪ್ರಜೆಗಳು ಎಂದಿಗೂ ಹಿಂತಿರುಗುವುದಿಲ್ಲ. ದೇಶ ಸಂಪೂರ್ಣ ದಂಗೆಯತ್ತ ಸಾಗುತ್ತಿದೆ. ಇದಕ್ಕೆ ಭ್ರಷ್ಟ ರಾಜಕಾರಣಿಗಳೇ ಕಾರಣ ಎಂದು ಆರೋಪಿಸಿದರು. ಭರಿಸಲಾಗದ ವಿದೇಶಿ ಸಾಲದಿಂದ ಅಭಿವೃದ್ಧಿ ಕೆಲಸಗಳು ನಿಷ್ಪಲ. ಮಾನವನ ಮೂಲಭೂತ ಅವಶ್ಯಕತೆಗಳನ್ನು ಪೂರೈಸುವುದು ಸಹ ಮುಖ್ಯವಾಗಿದೆ ಎಂದು ಹೇಳಿದರು.
ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತದ ನೆರವು ಪರಿಹಾರವಾಗಿದೆ ಎಂದು ಅವರು ಹೇಳಿದರು. ಆದರೆ ಆ ನೆರವು ಆಡಳಿತ ರಾಜಕಾರಣಿಗಳಿಂದ ತಲಪಬೇಕಾದವರಿಗೆ ಲಭ್ಯವಾಗುತ್ತಿಲ್ಲ. ವಿದೇಶಗಳಿಂದ ಸಾಲ ಪಡೆದು ಕಟ್ಟಡ ನಿರ್ಮಾಣ ಕಾರ್ಯ ಮಾಡುತ್ತಿರುವ ಶ್ರೀಲಂಕಾದ ಅನುಭವ ಕೇರಳಕ್ಕೆ ಪಾಠವಾಗಬೇಕು ಎಂದು ಅವರು ನಿನ್ನೆ ಭಾರತೀಯ ಪತ್ರಕರ್ತರಲ್ಲಿ ತಿಳಿಸಿದರು.