HEALTH TIPS

ವಾರಾಣಸಿಯ ನಮೋ ಘಾಟ್ ಶೀಘ್ರ ಪ್ರವಾಸಿ ತಾಣ

           ವಾರಾಣಸಿ: ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿನಿಧಿಸುವ ಲೋಕಸಭಾ ಕ್ಷೇತ್ರ ವಾರಾಣಸಿಯಲ್ಲಿರುವ ನಮೋ ಘಾಟ್ ಎಂದೇ ಖ್ಯಾತವಾದ ಖಿಡಕಿಯಾ ಘಾಟ್ ಶೀಘ್ರವೇ ಪ್ರವಾಸಿ ತಾಣವಾಗಿ ಹೊರಹೊಮ್ಮಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

        ಕೈ ಮುಗಿಯುವಂತಿರುವ 3 ಶಿಲ್ಪಗಳಿರುವ ಈ ಥಾಟ್‌ ಅನ್ನು ₹35 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ.

              ಪ್ರಧಾನಿ ಮೋದಿ ಅವರೇ ಘಾಟ್ ಅನ್ನು ಉದ್ಘಾಟಿಸುವ ನಿರೀಕ್ಷೆಯಿದೆ ಎಂದು ಬುಧವಾರ ಅಧಿಕಾರಿಗಳು ಹೇಳಿದ್ದಾರೆ.

           ವಾರಾಣಸಿಯಲ್ಲಿರುವ 85ನೇ ಘಾಟ್ ಇದಾಗಿದ್ದು, 25 ಅಡಿಯ 2 ಶಿಲ್ಪಗಳು ಮತ್ತು 15 ಅಡಿಯ ಶಿಲ್ಪವು ಗಂಗಾ ನದಿಗೆ ನಮಸ್ಕರಿಸುವ ಭಂಗಿಯಲ್ಲಿದೆ. ಮುಂದಿನ ದಿನಗಳಲ್ಲಿ 75 ಅಡಿಯ ಇದೇ ರೀತಿಯ ಶಿಲ್ಪವನ್ನು ಸ್ಥಾಪಿಸುವ ಪ್ರಸ್ತಾವ ಇದೆ ಎಂದು ಹೇಳಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries