ಕಾಸರಗೋಡು: ವಿಶ್ವ ಆಟಿಸಂ ಜಾಗೃತಿ ದಿನಾಚರಣೆ ಅಂಗವಾಗಿ ಜಿಲ್ಲಾ ಸಾಮಾಜಿಕ ನ್ಯಾಯ ಕಛೇರಿ, ಅಕ್ಕರ ಫೌಂಡೇಶನ್ ಹಾಗೂ ಬೆಟರ್ ಲೈಫ್ ಫೌಂಡೇಶನ್ ವತಿಯಿಂದ ಆಟಿಸಂ ಜಾಗೃತಿ ಸೈಕಲ್ ರ್ಯಾಲಿ, ಸಾರ್ವಜನಿಕ ಕಾರ್ಯಕ್ರಮ ಹಾಗೂ ಕಲಾ ಕಾರ್ಯಕ್ರಮ ಜರುಗಿತು.
ಈ ವರ್ಷದ ವಿಶ್ವ ಆಟಿಸಂ ಜಾಗೃತಿ ದಿನವನ್ನು 'ಸಾರ್ವಜನಿಕ ಸ್ಥಳಗಳಲ್ಲಿ ಅಂಗವಿಕಲರನ್ನು ಸಕ್ರಿಯಗೊಳಿಸುವುದು'ಎಂಬ ಧ್ಯೇಯವಾಕ್ಯದೊಂದಿಗೆ ಆಚರಿಸಲಾಯಿತು, ಈ ಹಿನ್ನೆಲೆಯಲ್ಲಿ ಸಂದೇಶ ಸಾರುವ ಸೈಕಲ್ ರ್ಯಾಲಿ ಕಾಸರಗೋಡು ಹೊಸ ಬಸ್ ನಿಲ್ದಾಣದಿಂದ ಆರಂಭಗೊಂಡು ನಾಯಮರ್‍ಮೂಲೆ ಗುಡ್ಡದಲ್ಲಿ ಸಮಾರೋಪಗೊಂಡಿತು.. ಕಾಸರಗೋಡು ನಗರಠಾಣೆ ಸಿಐ ಪಿ.ಅಜಿತ್ ರಾಲಿಗೆ ಚಾಲನೆ ನೀಡಿದರು.
ಹಿಲ್‍ಟಾಪ್ ಅರೆನಾದಲ್ಲಿ ನಡೆದ ಸಮಾರಂಭದಲ್ಲಿ ಜಿಲ್ಲಾ ಸೆಷನ್ಸ್ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ಕೃಷ್ಣ ಕುಮಾರ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.ವಿಕಲಚೇತನರ ಅಭ್ಯುದಯ ಮತ್ತು ಅಭಿವೃದ್ಧಿ ಸಾರ್ವಜನಿಕರ ಜವಾಬ್ದಾರಿಯಾಗಿದ್ದು, ವಿಕಲಚೇತನ ಮಕ್ಕಳ ಪಾಲಕರು ಹಾಗೂ ಕುಟುಂಬದ ಸದಸ್ಯರಿಗೆ ಸೂಕ್ತ ತರಬೇತಿಯ ಅಗತ್ಯವಿದೆ ಎಂದರು. ಇಂತಹ ವ್ಯಕ್ತಿಗಳ ಶಿಕ್ಷಣ, ಉದ್ಯೋಗ ತರಬೇತಿ ಮತ್ತು ಉದ್ಯೋಗದ ಎಲ್ಲಾ ಹಂತಗಳಲ್ಲಿ ಪೆÇೀಷಕರೊಂದಿಗೆ ಸರ್ಕಾರದ ವ್ಯವಸ್ಥೆ, ನ್ಯಾಯಾಂಗ ಮತ್ತು ಸ್ವಯಂಸೇವಕರು ಬೆಂಬಲವನ್ನು ಖಚಿತಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾ ಸಾಮಾಜಿಕ ಕಾನೂನು ಅಧಿಕಾರಿ ಶೀಬಾ ಮುಮ್ತಾಜ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪರೀಕ್ಷಾಧಿಕಾರಿ ಪಿ. ಬಿಜು, ನವಜೀವನ ವಿಶೇಷ ಶಾಲೆಯ ನಿರ್ದೇಶಕ ಫಾದರ್ ಜೋಸ್, ಸಾಮಾಜಿಕ ಕಾರ್ಯಕರ್ತೆ ಸುಲೈಖಾ ಮಾಹಿನ್, ವಲ್ರ್ಡ್ ಬುಕ್ ಆಫ್ ರೆಕಾಡ್ರ್ಸ್ ವಿಜೇತ ಮರ್ವಾನ್ ಮುನಾವರ್, ತಮ್ಮ ಸಂಗೀತ ಕೌಶಲ್ಯದಿಂದ ದೌರ್ಬಕ್ಯ ಮೀರಿ ನಿಂತವರು, ಅಕ್ಕರ ಫೌಂಡೇಶನ್ ವ್ಯವಸ್ಥಾಪಕ ಎನ್. ಮೊಹಮ್ಮದ್ ಯಾಸಿನ್ ಮತ್ತು ಬೆಟರ್ ಲೈಫ್ ಫೌಂಡೇಶನ್ ಸಂಸ್ಥಾಪಕ ಮೋಹನ್ ದಾಸ್ ವಯಲಂಕುಜಿ ಉಪಸ್ಥಿತರಿದ್ದರು. ಈ ಸಂದರ್ಭವಿಕಲಚೇತನ ಮಕ್ಕಳಿಗೆ ಹಾಗೂ ಪೆÇೀಷಕರಿಗೆ ವಿವಿಧ ಕಲಾ ಕಾರ್ಯಕ್ರಮಗಳು ಹಾಗೂ ಸ್ಪರ್ಧೆಗಳು ನಡೆಯಿತು.