HEALTH TIPS

ಕಪ್ಪುಶಿಲೀಂದ್ರ ಸೋಂಕು ಹರಡಲು ಗೋವಿನ ಸೆಗಣಿ ಕಾರಣ?

                 ನವದೆಹಲಿಕಳೆದ ವರ್ಷ ಸಾವಿರಾರು ಕೋವಿಡ್19 ರೋಗಿಗಳಲ್ಲಿ ಪತ್ತೆಯಾದ ಬ್ಲಾಕ್ ಫಂಗಸ್ ಸಾಂಕ್ರಾಮಿಕದ ಹರಡುವಿಕೆಗೆ ಗೋವಿನ ಸೆಗಣಿ ಕಾರಣವಾಗಿರುವ ಸಾಧ್ಯತೆಯಿದೆಯೆಂದು ಅಂತರಾಷ್ಟ್ರೀಯ ವೈದ್ಯಕೀಯ ಸಂಶೋಧಕರು ಸಂದೇಹ ವ್ಯಕ್ತಪಡಿಸಿದ್ದಾರೆ.

             ಮ್ಯುಕಾರೇಲೆಸ್ ಫಂಗಿ ಎಂಬ ಶಿಲೀಂಧ್ರದಿಂದಾಗಿ ಮ್ಯುಕಾರೋಮೈಕೊಸಿಸ್ ಎಂಬ ಅಪಾಯಕಾರಿ ಸೋಂಕು ಉಂಟಾಗಿದೆ. ಕಪ್ಪುಶಿಲೀಂಧ್ರ ಸೋಂಕು ತಗಲಿದ ಶೇ.54 ಮಂದಿ ಕೋವಿಡ್19 ರೋಗಿಗಳು ಸಾವನ್ನಪ್ಪಿದ್ದಾರೆಂದು ರೋಗ ನಿಯಂತ್ರಣ ಹಾಗೂ ತಡೆ ಕುರಿತ ಅಮೆರಿಕ ಕೇಂದ್ರದ ಸಂಶೋಧಕರು ತಿಳಿಸಿದ್ದಾರೆ. 2021ರ ಮೇನಲ್ಲಿ ಕೋವಿಡ್19ನ ಎರಡನೆ ಅಲೆಯ ಹಾವಳಿಯ ಸಂದರ್ಭದಲ್ಲಿ ಕಾಣಿಸಿಕೊಂಡಿದ್ದ ಮ್ಯೂಕಾರೊಮೈಕೊಸಿಸ್ ಅಥವಾ ಕಪ್ಪುಶಿಲೀಂಧ್ರ ರೋಗವನ್ನು ಸಾಂಕ್ರಾಮಿಕವೆಂದು ಘೋಷಿಸಲಾಗಿತ್ತು. ಜಗತ್ತಿನಾದ್ಯಂತ ಆ ಅವಧಿಯಲ್ಲಿ ಪತ್ತೆಯಾದ ಕಪ್ಪುಶಿಲೀಂದ್ರ ಸೋಂಕಿನ ಪ್ರಕರಣಗಳಲ್ಲಿ ಶೇ.71ರಷ್ಟು ಪ್ರಕರಣಗಳು ಭಾರತದಲ್ಲೇ ವರದಿಯಾಗಿದ್ದವು.

            ಮ್ಯುಕೊರಲ್ಸ್ ವೈರಾಣುಗಳು ಹೇರಳವಾಗಿರುವ ಗೋವಿನ ಸೆಗಣಿಯು ಕೋವಿಡ್19 ಸೋಂಕಿನ ಜೊತೆ ಕಾಣಿಸಿಕೊಂಡಿದ್ದ ಕಪ್ಪುಶಿಲೀಂಧ್ರ ಸೋಂಕಿನಲ್ಲಿ ಮುಖ್ಯಪಾತ್ರವನ್ನು ವಹಿಸಿರುವ ಸಾಧ್ಯತೆಯಿದೆಯೆಂದು ಎಪ್ರಿಲ್‌ನಲ್ಲಿ ಅಮೆರಿಕದ ಸೂಕ್ಷ್ಮಜೀವಿಶಾಸ್ತ್ರ ಸೊಸೈಟಿಯ ನಿಯತಕಾಲಿಕ 'ಎಂಬಯೋ' ಎಪ್ರಿಲ್‌ನಲ್ಲಿ ಪ್ರಕಟಿಸಿದ ಪ್ರಬಂಧ ಲೇಖನವು ತಿಳಿಸಿದೆ.

            ಭಾರತದಲ್ಲಿ ಮ್ಯೂಕೊರೆಲ್ಸ್‌ಗಳು ಹೇರಳವಾಗಿರುವ ಗೋವಿನ ಸಗಣಿ ಹಾಗೂ ಪೈರಿನ ಕೂಳೆಗಳನ್ನು ಸುಡುವ ಪದ್ಧತಿಯಿರುವುದರಿಂದ ಹೊಗೆಯ ಮೂಲಕ ವೈರಾಣುಗಳು ವ್ಯಾಪಕವಾಗಿ ಹರಡುವ ಸಾಧ್ಯತೆಯಿದೆಯೆಂದು ಪ್ರಬಂಧದ ಲೇಖಕಿ ಹಾಗೂ ಅಮೆರಿಕದ ಹ್ಯೂಸ್ಟನ್ ನಗರದ ಸ್ವತಂತ್ರ ಸಂಶೋಧಕಿ ಜೆಸ್ಸಿ ಸ್ಕಾರಿಯಾ ಹೇಳುತ್ತಾರೆ.

           ಜೈವಿಕ ಸಾಂಧ್ರತೆಯಿಂದ ಹೊರಹೊಮ್ಮುವ ಹೊಗೆಯ ಮೂಲಕ ಕಪ್ಪುಶಿಲೀಂದ್ರದ ಬೀಜಕೋಶಗಳು ದೀರ್ಘದೂರದವರೆಗೆ ಪ್ರಯಾಣಿಸಬಲ್ಲದು ಎಂಬುದು ಸಿದ್ದಾಂತವನ್ನು ಆಧರಿಸಿ ಈ ಅಧ್ಯಯನವನ್ನು ನಡೆಸಲಾಗಿದೆ ಎಂದವರು ಹೇಳಿದ್ದಾರೆ. ಭಾರತದಲ್ಲಿ ಸಾಂಪ್ರದಾಯಿಕವಾಗಿ ಗೋವಿನ ಸೆಗಣಿಯ ಬಳಕೆಯು ವ್ಯಾಪಕವಾಗಿದೆ. ಅದನ್ನು ಧಾರ್ಮಿಕ ವಿಧಿವಿಧಾನಗಳಲ್ಲಿ ಹಾಗೂ ಆಯುರ್ವೇದ ಔಷಧಿಗಳಲ್ಲಿ ಬಳಸಲಾಗುತ್ತಿದೆ.

             ಗೋಹತ್ಯೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಿರುವ ಮಹಾರಾಷ್ಟ್ರ ಹಾಗೂ ಗುಜರಾತ್ ರಾಜ್ಯಗಳಿಗೆ ಹೋಲಿಸಿದರೆ ಕೇರಳ ಮತ್ತು ಪಶ್ಚಿಬಂಗಾಳಗಳಲ್ಲಿ ಮ್ಯುಕೊರ್‌ಮೈಕೊಸಿಸ್ (ಕಪ್ಪುಶಿಲೀಂಧ್ರ) ಸೋಂಕಿನ ಹಾವಳಿ ತೀರಾ ಕಡಿಮೆಯಾಗಿದೆಯೆಂದು ಸ್ಕಾರಿಯಾ ಹೇಳುತ್ತಾರೆ. ಮಹಾರಾಷ್ಟ್ರ, ಗುಜರಾತ್ ರಾಜ್ಯಗಳಲ್ಲಿ ಬೆಂಕಿ ಉರಿಸಲು ಹಾಗೂ ಧಾರ್ಮಿಕ ವಿಧಿವಿಧಾನಗಳಿಗೆ ಗೋವಿನ ಸಗಣಿಯನ್ನು ವ್ಯಾಪಕವಾಗಿ ಬಳಸಲಾಗುತ್ತಿರುವ ಬಗ್ಗೆಯೂ ಅವರು ಗಮನಸೆಳೆದಿದ್ದಾರೆ.

ಕೇರಳದಲ್ಲಿ ಗೋವಿನ ಹತ್ಯೆಗೆ ಹಾಗೂ ಗೋಮಾಂಸ ಸೇವನೆಗೆ ಯಾವುದೇ ನಿಷೇಧ ಇಲ್ಲ. ಅಲ್ಲದೆ ಅಲ್ಲಿನ ಇಂಧನವಾಗಿ ಗೋವಿನ ಸಗಣಿಯನ್ನು ಬಳಸುವುದೂ ತೀರಾ ಕಡಿಮೆಯಾಗಿದೆ. ಆ ರಾಜ್ಯದಲ್ಲಿ ಕಪ್ಪುಶಿಲೀಂದ್ರ ಸೋಂಕಿನ ಪ್ರಕರಣ ಅತ್ಯಂತ ವಿರಳ ಸಂಖ್ಯೆಯಲ್ಲಿ ಪತ್ತೆಯಾಗಿರುವುದಾಗಿ ಸ್ಕಾರಿಯಾ ಹೇಳಿದ್ದಾರೆ.

             ಕೋವಿಡ್19 ಸಾಂಕ್ರಾಮಿಕದ ಸಂದರ್ಭದಲ್ಲಿ ಧಾರ್ಮಿಕ ಹಾಗೂ ರಾಜಕೀಯ ವಾಗಾಡಂಬರಗಳಿಂದ ಪ್ರೇರಿತರಾಗಿ ಸೋಂಕಿನಿಂದ ರಕ್ಷಣೆಯನ್ನು ಅಥವಾ ಚಿಕಿತ್ಸೆಯನ್ನು ಪಡೆಯಲು ವ್ಯಾಪಕವಾಗಿ ಗೋವಿನ ಸೆಗಣಿ ಹಾಗೂ ಗೋಮಾತ್ರವನ್ನು ಬಳಸಲಾಗಿತ್ತು. ಅಲ್ಲದೆ ಗೋವಿನ ಸೆಗಣಿಯಿಂದ ತಯಾರಿಸಿ ಬೆರಣಿಗಳನ್ನು ಉರಿಸಿ ಹೊಗೆಯೆಬ್ಬಿಸಿರುವುದನ್ನು ಕೂಡಾ ಪ್ರಬಂಧದಲ್ಲಿ ಗಮನಸೆಳೆಯಲಾಗದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries