ಪೆರ್ಲ: ಎಣ್ಮಕಜೆ ಗ್ರಾ ಪಂ.ನ ಎಲ್ಲಾ ಅಂಗನವಾಡಿಗಳಿಗೆ ನೂತನ ನಾಮ ಫಲಕ ವಿತರಿಸಲಾಯಿತು. 32 ಅಂಗನವಾಡಿಗಳಿಗೆ ನಾಮ ಫಲಕ ವಿತರಿಸಲಾಗಿದ್ದು ಇದರ ಪಂಚಾಯತು ಮಟ್ಟದ ಉದ್ಘಾಟನೆಯು ಪೆರ್ಲ ಅಂಗನವಾಡಿಯಲ್ಲಿ ಜರಗಿತು.
ಗ್ರಾ. ಪಂ. ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಉದ್ಘಾಟಿಸಿದರು. ಪಂ.ಸದಸ್ಯರಾದ ರಮ್ಲ, ಇಂದಿರಾ, ಮಹೇಶ್ ಭಟ್, ಐಸಿಡಿಎಸ್ ಮೇಲ್ವಿಚಾರಕಿ ಪ್ರೇಮಲತಾ, ಅಂಗನವಾಡಿ ಅಧ್ಯಾಪಕಿ ಅನಂತಿ ಕೆ, ಲಲಿತ ಮೊದಲಾದವರು ಭಾಗವಹಿಸಿದ್ದರು.